ಕಾಸರಗೋಡು: ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹೊಸಂಗಡಿ ಅಂಗಡಿಪದವು ಪರಿಸರದ ಯುವತಿಯೊಬ್ಬಳು ಇಸ್ಲಾಂ ಮತಕ್ಕೆ ಮತಾಂತರಗೊಂಡು ವಿವಾಹವಾದ ಘಟನೆ ವರದಿಯಾಗಿದೆ. ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಪರಿಸರ ಪ್ರದೇಶಗಳಲ್ಲಿ ಆತೀವ ಜಾಗರೂಕತೆ ಪಾಲಿಸಬೇಕೆಂದು ಗುಪ್ತಚರ ಏಜೆನ್ಸಿಗಳು ಮುನ್ನೆಚ್ಚರಿಕೆ ನೀಡಿವೆ.
ಹೊಸಂಗಡಿ ಅಂಗಡಿಪದವು ಪ್ರದೇಶದ 24ರ ಹರೆಯದ ಇಶಾ ಎಂಬ ಹಿಂದೂ ಯುವತಿಯು ಜೂ 7ರಂದು ನಾಪತ್ತೆಯಾಗಿದ್ದಳು. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದರು.
ಪೊಲೀಸರು ತನಿಖೆ ನಡೆಸುತ್ತಿರುವ ಮಧ್ಯೆ ಇಶಾ ಆಯಿಷಾ ಸಾರಾಳಾಗಿ ಮತಾಂತರಗೊಂಡು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಿವಾಸಿಯಾದ ಮುಸ್ಲಿಂ ಯುವಕನನ್ನು ಮದುವೆಯಾಗಿ ಮಂಜೇಶ್ವರ ಠಾಣೆಗೆ ಆಗಮಿಸಿದ್ದಾಳೆ.ಬೆಂಗಳೂರಿನಲ್ಲಿ ಆವರಿಬ್ಬರ ವಿವಾಹ ನಡೆದಿರುವುದಾಗಿ ತಿಳಿದುಬಂದಿದೆ. ಇದೇ ವೇಳೆ ಇಶಾ ಕಳೆದ ಕೆಲವು ತಿಂಗಳ ಹಿಂದೆಯೇ ಮತಾಂತರಗೊಂಡಿರುವುದಾಗಿ ಹೇಳಲಾಗುತ್ತಿದೆ. ಈ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.