
ಬೆಳ್ತಂಗಡಿ : ಏರೋಸ್ಪೇಸ್ ಇಂಜಿನಿಯರ್ ಆಕಾಂಕ್ಷ ಎಸ್. ನಾಯರ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರೊಫೆಸರ್ ಕೇರಳ ಮೂಲದ ಬಿಜಿಲ್ ಸಿ ಮ್ಯಾಥ್ಯೂನನ್ನು ನಿನ್ನೆ ರಾತ್ರಿ(ಮೇ.19) ಬಂಧಿಸಲಾಗಿದೆ.
ಮೇ.19 ರಂದು ಮಧ್ಯಾಹ್ನ ಆಕಾಂಕ್ಷಳ ಮ*ರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಿವಿಲ್ ಸರಕಾರಿ ಆಸ್ಪತ್ರೆಯವರು ರಾತ್ರಿ ಮನೆಯವರಿಗೆ ಮೃ*ತದೇಹ ಹಸ್ತಾಂತರಿಸಿದ್ದು, ಆಂಬುಲೆನ್ಸ್ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ರಾತ್ರಿ 2 ಗಂಟೆಗೆ ತಂದಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿ ವಿಮಾನ ನಿಲ್ದಾಣದಿಂದ ಆಕಾಂಕ್ಷ ಕೆಲಸ ಮಾಡುತ್ತಿದ್ದ ಕಂಪನಿಯ ವತಿಯಿಂದ ಉಚಿತ ವಿಮಾನ ವ್ಯವಸ್ಥೆ ಮಾಡಲಾಗಿದೆ. ಇಂದು (ಮೇ.20)ರಾತ್ರಿ 8 ಗಂಟೆಗೆ ಸ್ಪೈಸ್ ಏರ್ ಲೈನ್ಸ್ ವಿಮಾನದ ಮೂಲಕ ಮೃತದೇಹವನ್ನು ತರಲಿದ್ದು, ಬೆಂಗಳೂರು ವಿಮಾನ ನಿಲ್ದಾಣಕ್ಕೆ ರಾತ್ರಿ 11 ಗಂಟೆಗೆ ತಲುಪಲಿದೆ. ಅಲ್ಲಿಂದ ಮೇ.21 ರಂದು ಬೆಳ್ತಂಗಡಿಯ ಬೋಳಿಯಾರ್ನ ಆಕಾಂಕ್ಷ ಮನೆಗೆ ಆಂಬುಲೆನ್ಸ್ ಮೂಲಕ ಬೆಳಗ್ಗೆ ಮೃ*ತದೇಹ ಬರಲಿದ್ದು, ಬಳಿಕ ಅಂ*ತ್ಯಸಂಸ್ಕಾರ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
