ಕಾರ್ಕಳ: ಮುಂಡ್ಕೂರು ದೇವಸ್ಥಾನದಲ್ಲಿ ಪಟಾಕಿ ಅವಘಡ – ನಾಲ್ವರಿಗೆ ಗಾಯ

ಕಾರ್ಕಳ : ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮರಥೋತ್ಸವದ ಸಿಡಿಮದ್ದು ಪ್ರದರ್ಶನ ವೇಳೆ ಉಂಟಾದ ಅವಘಡದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಫೆ. 18ರ ರಾತ್ರಿ ಮಾಲೆ ಪಟಾಕಿ ಸಿಡಿಯುವ ವೇಳೆ ಅವಘಡವಾಗಿದ್ದು, ಇದರಿಂದ ಓರ್ವರು ಹಿರಿಯರು ಸೇರಿದಂತೆ ಮೂವರು ಮಕ್ಕಳಿಗೆ ಗಾಯವಾಗಿದೆ. ಗಾಯಗೊಂಡವರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲಾಗಿದ್ದು, ಅಂದೇ ಅವರು ಮನೆಗೆ ತೆರಳಿರುತ್ತಾರೆ.

ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ಈ ದೇವಸ್ಥಾನದ ಜಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ದುರ್ಘಟನೆ ಸಂಭವಿಸಿದ ವೇಳೆ ಜನತೆ ದಿಕ್ಕಾಪಾಲಾಗಿ ಓಡಿದ್ದು ಈ ವೇಳೆ ಕೆಲವರು ಬಿದ್ದಿರುತ್ತಾರೆ. ಅದೃಷ್ಟವಶಾತ್‌ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಇಷ್ಟೊಂದು ಭಕ್ತರು ಸೇರುವ ಕಾರಣ ಮುನ್ನೆಚ್ಚರಿಕೆಯಾಗಿ ಅಗ್ನಿಶಾಮಕ ದಳದವರು, ಪ್ರಥಮ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕಿತ್ತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

Check Also

ಮಂಗಳೂರು: ಹೆದ್ದಾರಿ ಮಧ್ಯೆ ಧಗ ಧಗನೆ ಹೊತ್ತಿ ಉರಿದ ಬಿಎಂಡಬ್ಲ್ಯು ಕಾರು..!

ಮಂಗಳೂರು: ದೆಹಲಿ ನೋಂದಣಿಯ ಹಳೆಯ ಬಿಎಂಡಬ್ಲ್ಯು ಕಾರನ್ನು ಸರ್ವಿಸಿಗೆ ಒಯ್ಯುತ್ತಿದ್ದಾಗಲೇ ಹೆದ್ದಾರಿ ಮಧ್ಯದಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟು ಬೂದಿಯಾದ ಘಟನೆ …

Leave a Reply

Your email address will not be published. Required fields are marked *

You cannot copy content of this page.