ಧರ್ಮಸ್ಥಳ: ಭಕ್ತಾದಿಗಳ ಪ್ರೀತಿಯ ‘ಗಿರೀಶ’ ಇನ್ನಿಲ್ಲ- ಕಣ್ಣೀರು ಮಿಡಿದ ಖಾವಂದರು

ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಕುಲ ಗೋಶಾಲೆಯಲ್ಲಿದ್ದ, ಹೆಗ್ಗಡೆಯವರ‌ ಪ್ರೀತಿಯ ಗೀರ್ ತಳಿಯ ಎತ್ತು ಗಿರೀಶ ಜ.18 ರಂದು ರಾತ್ರಿ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ.

ಬಹಳ ವರ್ಷಗಳಿಂದ ಈ ಗೋಶಾಲೆಯಲ್ಲಿದ್ದ ಗಿರೀಶನಿಗೆ 18 ವರ್ಷ ವಯಸ್ಸು. ಕ್ಷೇತ್ರದ ಯಾವುದೇ ಉತ್ಸವಗಳಿಗೂ ಬಸವನಾಗಿ ಗಿರೀಶನೇ ಮುಂಚೂಣಿಯಲ್ಲಿತ್ತು. ಉತ್ಸವಗಳಿಗೆ ಹೋಗುವುದರಲ್ಲೇ ಸಂತೋಷ ಪಡುತ್ತಿದ್ದ ಈ ಬಸವ ಇದೀಗ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ.ಎಲ್ಲರೊಂದಿಗೆ ಸಕ್ರೀಯವಾಗಿದ್ದ ಗಿರೀಶನಿಗೆ ದಿಢೀರ್ ಹೃದಯಾಘಾತ ಸಂಭವಿಸಿ ಉಸಿರುಚೆಲ್ಲಿದೆ. ಜ.19 ರಂದು ಬೆಳಗ್ಗೆ 11 ಗಂಟೆ ವೇಳೆ ಗೌರವಯುತವಾಗಿ ಆತನ ಅಂತ್ಯಸಂಸ್ಕಾರ ನಡೆಸಲಾಯಿತು.

ಗಿರೀಶ ಶ್ರೀ ಕ್ಷೇತ್ರ ಧರ್ಮಸ್ಥಳದ ವಿಶೇಷತೆಯಾಗಿತ್ತು. ಗೋಶಾಲೆಯಲ್ಲಿ ಅತೀ ಹಿರಿಯನಾಗಿದ್ದ ಗಿರೀಶನಿಗೆ ಖಾವಂದರೆಂದರೆ ಬಲು ಪ್ರೀತಿ. ಕ್ಷೇತ್ರದ ಉತ್ಸವದಲ್ಲಿ ಖಾವಂದರು ಗಿರೀಶ ಎಂದು ಕರೆದರೆ ಗಿರೀಶನು ಪ್ರೀತಿಯಿಂದ ತಲೆ ಎತ್ತಿ ಖಾವಂದರನ್ನು ನೋಡುತ್ತಿದ್ದ. ಇವರಿಬ್ಬರ ಬಾಂಧವ್ಯ ಅನನ್ಯವಾಗಿತ್ತು.

ಇತ್ತೀಚೆಗೆ ಧರ್ಮಸ್ಥಳಕ್ಕೆ ಆಗಮಿಸಿದ ಪುಂಗನೂರು ಹಸುವಿನೊಂದಿಗೆ ಗಿರೀಶನ ಒಡನಾಟ ಚೆನ್ನಾಗಿರುತ್ತಿತ್ತು. ಪುಂಗನೂರು ಕರು ಗಿರೀಶನಿಗೆ ಏನೇ ಮಾಡಿದರು ಸಿಟ್ಟಾಗದೆ ಪ್ರೀತಿಯಿಂದ ಸ್ವೀಕರಿಸುತ್ತಿದ್ದ. ಒಟ್ಟಾರೆ ಗಿರೀಶನ ಅಗಲುವಿಕೆಯಿಂದ ಭಕ್ತಾದಿಗಳು ಕಂಬನಿ ಮಿಡಿದಿದ್ದಾರೆ.

Check Also

ಕಾರವಾರ: ಮಳೆಗೆ ಗುಡ್ಡ ಕುಸಿದು ʻಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ʼ ಬಂದ್ : ವಾಹನ ಸವಾರರ ಪರದಾಟ

ಕಾರವಾರ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಕಾರವಾರ-ಬೆಂಗಳುರು ರಾಷ್ಟ್ರೀಯ ಹೆದ್ದಾರಿ ಸಂಚಾರ …

Leave a Reply

Your email address will not be published. Required fields are marked *

You cannot copy content of this page.