

ಕಟೀಲು: ನವರಾತ್ರಿ ಮಹೋತ್ಸವ ಶುಭ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲಲಿತಾ ಪಂಚಮಿ ಆಚರಣೆ ನಡೆದಿದ್ದು, ಇಂದು ಮುಂಜಾನೆಯಿಂದಲೇ ಸಾವಿರಾರು ಮಂದಿ ಭಕ್ತರು ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದರು.ದೇಗುಲದಲ್ಲಿ ಚಂಡಿಕಾ ಹೋಮ, ವಿವಿಧ ಸೇವೆಗಳು ನಡೆಯುತ್ತಿದ್ದು, ರಾತ್ರಿ ಅನ್ನಪ್ರಸಾದ ಸ್ವೀಕರಿಸುವ ಮಹಿಳಾ ಭಕ್ತರಿಗೆ ದೇವರ ಶೇಷ ವಸ್ತ್ರ ವಿತರಿಸಲಾಗುತ್ತದೆ, ಈಗಾಗಲೇ ಸುಮಾರು 20 ಸಾವಿರ ಶೇಷವಸ್ತ್ರಗಳನ್ನು ವಿತರಿಸಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ.
ಸಂಜೆಯಿಂದಲೇ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಜನಸಂದಣಿಯನ್ನು ನಿಭಾಯಿಸಲು ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿದೆ.