ಸ್ಯಾಂಡಲ್ ವುಡ್ ಹಿರಿಯ ನಟ ‘ಬ್ಯಾಂಕ್ ಜನಾರ್ಧನ್’ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಬೆಂಗಳೂರು: ಸ್ಯಾಂಡಲ್ ವುಡ್ ಸಿನಿ ರಂಗದಲ್ಲಿ ಪೋಷಕ ನಟರಾಗಿ ತಮ್ಮದೇ ಆದಂತ ಛಾಪು ಮೂಡಿಸಿದ್ದವರು ಬ್ಯಾಂಕ್ ಜನಾರ್ಧನ್. ಇಂತಹ ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರಿಗೆ ಹೃದಯಾಘಾತವಾಗಿರೋದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಚೆಂದನವನದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರ ತಮ್ಮ ನಿವಾಸದಲ್ಲಿ ಇದ್ದಂತ ವೇಳೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅವರನ್ನು ಕೂಡಲೇ ಕುಟುಂಬಸ್ಥರು ಸಮೀಪದ ವಿಕ್ರಮ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರೋದಾಗಿ ತಿಳಿದು ಬಂದಿದೆ.

ಇದೀಗ ವಿಕ್ರಂ ಆಸ್ಪತ್ರೆಯಲ್ಲಿ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರಿಗೆ ವೈದ್ಯರು ಚಿಕಿತ್ಸೆ ನಡೆಸುತ್ತಿದ್ದಾರೆ. ವಿವಿಧ ಪರೀಕ್ಷೆಯ ಜೊತೆಗೆ ಚಿಕಿತ್ಸೆಯನ್ನು ನೀಡುತ್ತಿರೋದಾಗಿ ಹೇಳಲಾಗುತ್ತಿದೆ.

ಅಂದಹಾಗೇ ಸ್ಯಾಂಡಲ್ ವುಡ್ ನಟ ಬ್ಯಾಂಕ್ ಜನಾರ್ಧನ್ ಕಳೆದ 40 ವರ್ಷಗಳಿಗಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ನಟನೆಯ ಚಿತ್ರಗಳು 500ಕ್ಕೂ ಹೆಚ್ಚು. ನಟ, ಪೋಷಕ ನಟ, ಖಳನಾಯಕ ಸೇರಿದಂತೆ ಹಲವು ರೋಲ್ ಗಳಲ್ಲಿ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದರು.

ಇಂತಹ ಕನ್ನಡದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ಅವರು ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಬಹುಬೇಗ ಗುಣಮುಖರಾಗಿ ಬರಲಿ ಅಂತ ನಾನು, ನೀವೆಲ್ಲ ಆಶಿಸೋಣ.

Check Also

ತುಳುನಾಡಿನ ಪುರಾಣ ಪ್ರಸಿದ್ಧ ದೈವಸ್ಥಾನದ ನಿರ್ಮಾಣ ಹಂತದ ಕಟ್ಟಡ ಧ್ವಂಸ..!

ಉಳ್ಳಾಲ: ತುಳುನಾಡಿನ ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕಾರಣೀಕ ಕೊಂಡಾಣ ಕ್ಷೇತ್ರದಲ್ಲಿ ಶ್ರೀ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಪರಿವಾರ ದೈವಗಳಿಗೆ …

Leave a Reply

Your email address will not be published. Required fields are marked *

You cannot copy content of this page.