ರಾಜ್ಯ IMA ಕುಟುಂಬ ವೈದ್ಯರ ರಾಜ್ಯ ನಿರ್ದೇಶಕರಾಗಿ ಡಾ. ಅಣ್ಣಯ್ಯ ಕುಲಾಲ್ ಅವಿರೋಧ ಆಯ್ಕೆ

ಮಂಗಳೂರು: 1927ರಲ್ಲಿ ಆರಂಭವಾಗಿರುವ ಭಾರತೀಯ ವೈದ್ಯಕೀಯ ಸಂಘದ ಪ್ರತಿಷ್ಠಿತ ಅಂಗ ಸಂಸ್ಥೆಗಳಲ್ಲಿ ಒಂದಾಗಿರುವ ಕರ್ನಾಟಕ ರಾಜ್ಯ ಕುಟುಂಬ ವೈದ್ಯರ (ಐಎಂಎ) ನಿರ್ದೇಶಕ/ಅಧ್ಯಕ್ಷರಾಗಿ ಖ್ಯಾತ ಕುಟುಂಬ ವೈದ್ಯರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು 2022-24 ರ ಸಾಲಿಗೆ ಅವಿರೋದವಾಗಿ ಆಯ್ಕೆ ಆಗಿರುತ್ತಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ಪ್ರಕಟಣೆ ತಿಳಿಸಿದೆ.

ಮಂಗಳೂರು ಕುಟುಂಬ ವೈದ್ಯರ ಸಂಘದ ಸ್ಥಾಪಕ ಕಾರ್ಯದರ್ಶಿ, ಪ್ರಸ್ತುತ ಅಧ್ಯಕ್ಷರೂ ಆಗಿರುವ ಡಾ ಕುಲಾಲ್ ಈ ಹಿಂದೆ 2012 ರಲ್ಲಿ ಇದೆ ಹುದ್ದೆಯನ್ನ ಅಲಂಕರಿಸಿ ಕರಾವಳಿ ಮಲೆನಾಡು ಭಾಗದ ಕುಟುಂಬ ವೈದ್ಯರನ್ನ ಸಂಘಟಿಸಿ ಶ್ರೀನಿವಾಸ್ ಮೆಡಿಕಲ್ ಕಾಲೇಜ್ ನಲ್ಲಿ ರಾಜ್ಯ ಕುಟುಂಬ ವೈದ್ಯರ ಸಮ್ಮೇಳನವನ್ನ ಯಶಸ್ವಿಯಾಗಿ ನಡೆಸಿದ್ದರು.

ಭಾರತೀಯ ವೈದ್ಯಕೀಯ ಸಂಘ ಮಂಗಳೂರಿನ ಮಾಜಿ ಅಧ್ಯಕ್ಷರೂ ಆಗಿರುವ ಇವರು ಸಂಘದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರಾಗಿ ಸಾಕಷ್ಟು ಜವಾಬ್ದಾರಿ ನಿರ್ವಹಿಸಿ ಅದಕ್ಕಾಗಿ ಪ್ರತಿಷ್ಠಿತ ರಾಜ್ಯ ಐ ಎಂ ಎ ಕೊಡ ಮಾಡುವ ಡಾ ಬಿ ಸಿ ರಾಯ್ ಪ್ರಶಸ್ತಿ, ವೈದ್ಯ ಬ್ರಹ್ಮ ಪ್ರಶಸ್ತಿ, ಕರ್ನಾಟಕ ಸರಕಾರ ಕೊಡುವ ಪ್ರತಿಷ್ಠಿತ ಡಿ. ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರು. ಜೊತೆಗೆ ಕರ್ನಾಟಕ ವೈದ್ಯ ಬರಹಗಾರರ ಬಳಗವನ್ನ ಬಲಿಷ್ಠವಾಗಿ ಕಟ್ಟಿ ಬೆಳೆಸಿದವರು.
ನಶಿಸುತ್ತಿರುವ ಕುಟುಂಬ ವೈದ್ಯ ಪದ್ದತಿಯನ್ನ ಉಳಿಸುವಲ್ಲಿ ಕಿರಿಯ ವೈದ್ಯರನ್ನ ಕುಟುಂಬ ವೈದ್ಯ ಪದ್ದತಿಗೆ ಎಳೆದು ತರುವಲ್ಲಿ ದೊಡ್ಡ ಪ್ರಯತ್ನ ಸಾಗಬೇಕು ಎಂಬ ಭಾರತೀಯ ವೈದ್ಯಕೀಯ ಸಂಘ ಹಾಗೂ ಕೇಂದ್ರ ಸರಕಾರದ ಆಶಯದಂತೆ ಎರಡು ವರ್ಷದ ಅವಧಿಯಲ್ಲಿ ಕರ್ನಾಟಕ ಕೇರಳ ಹಾಗೂ ಗೋವಾ ದ ಕುಟುಂಬ ವೈದ್ಯರು ಹಾಗೂ ಕಿರಿಯ ವೈದ್ಯರ ಸಹಕಾರ ದೊಂದಿದೆ ರಾಜ್ಯ ಮತ್ತೂ ರಾಷ್ಟ್ರ ಮಟ್ಟದ ಕುಟುಂಬ ವೈದ್ಯರ ಸಮ್ಮೇಳನವನ್ನ ಕರ್ನಾಟಕದಲ್ಲಿ ಆಯೋಜಿಸುವ ಚಿಂತನೆ,ನಗರದ ಖ್ಯಾತ ಕುಲಾಲ್ ಹೆಲ್ತ್ ಸೆಂಟರ್ ನ ವೈದ್ಯಕೀಯ ನಿರ್ದೇಶಕರು, ಸಂಘಟಕರು ಸಾಹಿತಿಯೂ ಆಗಿರುವ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರದ್ದು.

Check Also

ಪೆನ್‌ಡ್ರೈವ ಹಂಚಿಕೆ ಪ್ರಕರಣ – ಕೊನೆಗೂ ಅರೆಸ್ಟ್ ಆದ ಸಚಿವ ಜಮೀರ್ ಶಿಷ್ಯ ನವೀನ್, ಚೇತನ್

ಬೆಂಗಳೂರು : ಹಾಸನ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಆರೋಪದಲ್ಲಿ ಸಚಿವ ಜಮೀರ್ ಶಿಷ್ಯ ನವೀನ್ ಗೌಡ ಹಾಗೂ ಚೇತನ್‌ನನ್ನ …

Leave a Reply

Your email address will not be published. Required fields are marked *

You cannot copy content of this page.