
ಉಡುಪಿ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಹೊಸ ಸ್ಕೂಟರ್ ಬೆಂಕಿಗಾಹುತಿಯಾದ ಘಟನೆ ಘಟನೆ ಶಿರ್ವ ಬಳಿಯ ಪಂಜಿಮಾರು ಎಂಬಲ್ಲಿ ನಡೆದಿದೆ.
ಒಂದು ತಿಂಗಳ ಹಿಂದೆ ಪಾಲಮೆಯ ನಿವಾಸಿಯೊಬ್ಬರು ಮಂಗಳೂರಿನಲ್ಲಿ ಹೊಸ ಹೋಂಡಾ ಡಿಯೋ ಸ್ಕೂಟರ್ ಖರೀದಿಸಿದ್ದರು. ಮಂಗಳವಾರ ಮಧ್ಯಾಹ್ನ ಸ್ಕೂಟರ್ ಅನ್ನು ಮನೆಯ ಅಂಗಳದಲ್ಲಿ ನಿಲ್ಲಿಸಿದ್ದಾಗ, ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಸ್ಕೂಟರ್ ಸುಟ್ಟು ಕರಕಲಾಗಿದೆ.
ಶಿರ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಟ್ಟು ಕರಕಲಾದ ಅವಶೇಷಗಳ ಸಂಪೂರ್ಣ ಪರಿಶೀಲನೆ ನಡೆಸಿದರು.ಶಿರ್ವ ಪ್ರದೇಶದಲ್ಲಿ ಒಂದು ವಾರದೊಳಗೆ ಸಂಭವಿಸಿದ ಎರಡನೇ ವಾಹನ ಬೆಂಕಿ ಇದು. ಫೆಬ್ರವರಿ 9 ರಂದು, ಮಂಗಳೂರಿನಿಂದ ಶಿರ್ವಕ್ಕೆ ಪ್ರಯಾಣಿಸುತ್ತಿದ್ದ ಮಾರುತಿ ಡಿಸೈರ್ ಕಾರು ರಸ್ತೆ ಮಧ್ಯದಲ್ಲಿ ಬೆಂಕಿಗೆ ಆಹುತಿಯಾಗಿತ್ತು.
