

ಭಟ್ಕಳ: ಆನ್ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡಿದ್ದ ಯುವಕನೋರ್ವ ಜಿಗುಪ್ಸೆಗೊಳಗಾಗಿ ಪಾನಿಪುರಿಯೊಳಗೆ ಇಲಿ ಪಾಶಾಣ ಸೇರಿಸಿ ತಿಂದು ಸಾವನ್ನಪ್ಪಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.
ಭಟ್ಕಳದ ನಿವಾಸಿ ಹತ್ತೊಂಭತ್ತು ವರ್ಷದ ಮಹಮ್ಮದ್ ನಿಹಾಲ್ ಮೃತ ದುರ್ದೈವಿ. ಈತ ಕಳೆದ ಮೂರು ವರ್ಷಗಳಿಂದ ವಿಪರೀತವಾಗಿ ಮೊಬೈಲ್ ಚಟ ಬೆಳೆಸಿಕೊಂಡಿದ್ದ. ನಾನಾ ರೀತಿಯ ಆನ್ಲೈನ್ ಗೇಮ್ ಆಡುವುದನ್ನು ಕೂಡಾ ರೂಢಿಸಿಕೊಂಡಿದ್ದ.
ಹಣ ಹೂಡಿಕೆ ಮಾಡಿ ಆಡುತ್ತಿದ್ದ ಆಟದಲ್ಲಿ ಈತ ಹಣ ಕಳೆದುಕೊಂಡಿದ್ದ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆತ ಪಾನಿಪುರಿ ಜೊತೆಗೆ ಇಲಿ ಪಾಶಾಣ ಸೇರಿಸಿ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.