ಮಲ್ಪೆ: ವೇಶ್ಯಾವಾಟಿಕೆ ನಡೆಯುತ್ತಿದ್ದ ಬಾಡಿಗೆ ಮನೆಯೊಂದಕ್ಕೆ ಮಲ್ಪೆ ಠಾಣಾ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಗುರುವಾರ ರಾತ್ರಿ ದಾಳಿ ನಡೆದಿದೆ.
ತೆಂಕನಿಡಿಯೂರು ಗ್ರಾಮದ ಹಂಪನ್ ಕಟ್ಟೆಯ ಬಾಡಿಗೆ ಮನೆಯಲ್ಲಿ ಹಲವಾರು ಸಮಯಗಳಿಂದ ನಡೆಯುತ್ತಿದ್ದ ವೇಶ್ಯಾವಾಟಿಕೆ ಬಗ್ಗೆ ಸ್ಥಳೀಯರು ದೂರಿದ್ದರು.
ಇಂದು ಖಚಿತ ಮಾಹಿತಿ ಮೇರೆಗೆ ಮಲ್ಪೆ ವೃತ್ತ ನಿರೀಕ್ಷಕ ಸುರೇಶ್ ಕೆ.ಎಸ್ ನೇತೃತ್ವದ ತಂಡ ದಾಳಿ ನಡೆಸಿದಾಗ ಮನೆಯಲ್ಲಿ ಐವರು ಮಹಿಳೆಯರು ಹಾಗೂ ಮೂವರು ಪುರುಷರು ಇದ್ದರು ಎನ್ನಲಾಗಿದೆ. ದಾಳಿ ಸಂದರ್ಭದಲ್ಲಿ ಇಬ್ಬರು ಯುವಕರು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.