March 18, 2026
WhatsApp Image 2024-11-17 at 6.34.56 PM

ಡುಪಿ: ಸ್ವ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಟೈಲರಿಂಗ್ ಸೇರಿದಂತೆ ವಿವಿಧ ಉಚಿತ ತರಬೇತಿಗೆ ಅರ್ಜಿಯನ್ನು ಬ್ರಹ್ಮಾವರದಲ್ಲಿರುವಂತ ರುಡ್ ಸೆಟ್ ಸಂಸ್ಥೆಯಿಂದ ಆಹ್ವಾನಿಸಲಾಗಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಸಂಸ್ಥೆಯು, ಉಡುಪಿಯ ಬ್ರಹ್ಮಾವರ ಬಳಿಯಲ್ಲಿರುವಂತ ರುಡ್ ಸೆಟ್ ಸಂಸ್ಥೆಯಿಂದ ಮಹಿಳಾ 30 ದಿನಗಳ ಟೈಲರಿಂಗ್ ತರಬೇತಿಯನ್ನು ದಿನಾಂಕ 25.11.2024 ರಿಂದ 24.12.2024ರವರೆಗೆ ಆಯೋಜಿಸಲಾಗಿದೆ ಎಂದಿದೆ.

 

ಇದಲ್ಲದೇ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್‌ ತಯಾರಿಕೆ ತರಬೇತಿಯನ್ನು ಆಯೋಜಿಸಲಾಗಿದೆ. ಆ ತರಬೇತಿಯು ದಿನಾಂಕ 15.12.2024 ರಿಂದ 24.12.24ರ ವರೆಗೆ (10ದಿನ) ನಡೆಯುತ್ತದೆ ಎಂದು ಮಾಹಿತಿ ನೀಡಿದೆ.

ತರಬೇತಿಯ ಅವಧಿಯಲ್ಲಿ ವಸತಿ, ಊಟ, ತರಬೇತಿ ಉಚಿತವಾಗಿರುತ್ತದೆ. ಆಸಕ್ತ 18-45 ವರ್ಷದ ಒಳಗಿನವರು ಉಚಿತ ಸ್ವ ಉದ್ಯೋಗ ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದಿದೆ.

ಆಸಕ್ತರುhttps://forms.gle/ks4rqz9kFq89FKKPAಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ಈ ಸಂಬಂಧದ ಹೆಚ್ಚಿನ ಮಾಹಿತಿಗಾಗಿ 9844086383, 7022560492 ಸಂಖ್ಯೆಗಳಿಗೆ ಕರೆಮಾಡಿ ಪಡೆಯಬಹುದು. ಅಲ್ಲದೇ ಸಂಸ್ಥೆಯ ಅಧಿಕೃತ ವೆಬ್ ಸೈಟ್ www.rudsetitraining.org ಗೆ ಭೇಟಿ ನೀಡಿ ಪಡೆಯಬಹುದು ಎಂದು ತಿಳಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.