ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆ ಕಾಳಾವರ ಜನತಾ ಕಾಲೋನಿ ನಿವಾಸಿ ಹರೀಶ್ ಎಂದು ತಿಳಿದು ಬಂದಿದೆ.
ಗಂಡ ಹೆಂಡತಿ ನಡುವೆ ಜಗಳ ಉಂಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಬ್ಬರ ಮನಸ್ತಾಪವನ್ನು ಅಲ್ಲೇ ಸರಿಪಡಿಸಿದ್ದಾರೆ ಠಾಣೆಯಿಂದ ಆಟೋದಲ್ಲಿ ಬರುವಾಗ ಹೊಳೆ ಹತ್ತಿರ ನಿಲ್ಲಿಸಿ ಬ್ರಿಜ್ ಮೇಲಿಂದ ನದಿಗೆ ಹಾರಿದ್ದಾರೆ ಎಂದು ತಿಳಿಯಲಾಗಿದೆ.
ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಕಂಡ್ಲೂರು ನದಿಯಲ್ಲಿ ಹರೀಶ್ ಅವರ ಶವ ಹುಡುಕಾಟದಲ್ಲಿದ್ದಾರೆ.