

ಮಂಗಳೂರು: ಯುವತಿ ವಿವಾಹದ ಹಿಂದಿನ ದಿನ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಬೋಳಾರದ ಪಲ್ಲವಿ (22) ನಾಪತ್ತೆಯಾದ ವಧು. ಈಕೆಯ ಒಪ್ಪಿಗೆಯಂತೆ ನಿಶ್ಚಿತಾರ್ಥವಾಗಿತ್ತು. ಎಪ್ರಿಲ್ 16ರಂದು ವಿವಾಹ ನಿಗದಿಯಾಗಿತ್ತು. ಎಪ್ರಿಲ್ 15ರಂದು ಮಧ್ಯಾಹ್ನ ಆಕೆ ಮೆಹಂದಿ ಹಾಕಿಕೊಳ್ಳಲು ಬ್ಯೂಟಿ ಪಾರ್ಲ‌್ರಗೆ ಹೋಗಿ ಬರುವುದಾಗಿ ತಾಯಿಯಲ್ಲಿ ತಿಳಿಸಿ ಬೋಳಾರದ ಮನೆಯಿಂದ ಒಬ್ಬಳೇ ಹೋದವಳು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ.
ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರಿಗೆ ದೂರು ನೀಡಲಾಗಿದೆ. 5 ಅಡಿ ಎತ್ತರ, ಬಿಳಿ ಮೈಬಣ್ಣ ಸಾಧಾರಣ ಶರೀರ, ಕಪ್ಪು ಉದ್ದನೆಯ ಕೂದಲು ಹೊಂದಿದ್ದು ಕನ್ನಡ, ತುಳು, ಇಂಗ್ಲಿಷ್ ಮತ್ತು ಹಿಂದಿ ಮಾತನಾಡುತ್ತಾಳೆ.ನೀಲಿ ಜೀನ್ಸ್ ಪ್ಯಾಂಟ್ ಮತ್ತು ಕಪ್ಪು ಟೀ ಶರ್ಟ್ ಧರಿಸಿದ್ದಳು.