

ಉಡುಪಿ: ಸಾಲದ ಕಂತು ಮರುಪಾವತಿ ಮಾಡದಿದ್ದ ಕಾರಣ ಉಡುಪಿಯ ಸಂತೆಕಟ್ಟೆಯ ಸೊಸೈಟಿ ಸಿಬ್ಬಂದಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿದ ಘಟನೆ ನಡೆದಿದೆ.
ಕಲ್ಯಾಣಪುರ ನಿವಾಸಿ ನಿಖಿತಾ ಅವರು ಮೇರಿ ಕ್ರೆಡಿಟ್ ಕೋಅಪರೆಟಿವ್ ಸೊಸೈಟಿಯಲ್ಲಿ ಸಾಲ ಪಡೆದುಕೊಂಡಿದ್ದು ಸ್ವಲ್ಪ ಸ್ವಲ್ಪ ಮರುಪಾವತಿ ಮಾಡುತ್ತಿದ್ದರು. ಆದರೂ ಸೊಸೈಟಿ ಸಿಬ್ಬಂದಿ ಇವರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಹಣ ಕಟ್ಟುವಂತೆ ಟಾರ್ಚರ್ ಮಾಡಿದ್ದಾರೆ.
ಅಲ್ಲದೆ ಮನೆಗೇ ನುಗ್ಗಿ ಬೆದರಿಸಿ ಹತ್ತು ಸಾವಿರ ಒಮ್ಮೆಲೆ ಕಟ್ಟುವಂತೆ ಹಠ ಹಿಡಿದಿದ್ದಾರೆ. ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಬಗ್ಗೆ ನಿಖಿತಾ ಅವರು ಉಡುಪಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.