ಕಾಂಗ್ರೆಸ್ ನ ಮಹಿಳಾ ಸಮಾವೇಶ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಿರೂಪಕಿಯನ್ನು ನೋಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಅರಮನೆ ಮೈದಾನದಲ್ಲಿ ನಡೆದ ‘ನಾ ನಾಯಕಿ’ ಸಮಾವೇಶದಲ್ಲಿ ಪ್ರಿಯಾಂಕಾ ವಾದ್ರಾ ಬಂದು ಮಾತಾನಾಡಿದ್ದು ಸುದ್ದಿಯೇನೋ ಆಯಿತು. ಆದರೆ, ಇದರ ನಡುವೆ ಸಿದ್ಧರಾಮಯ್ಯ ಅವರ ಕೆಲವೇ ಸೆಕೆಂಡ್‌ನ ವಿಡಿಯೋ ಸಖತ್ ವೈರಲ್ ಆಗಿದೆ.
ಇಡೀ ಸಮಾವೇಶದ ಕಾರ್ಯಕ್ರಮದ ವೇದಿಕೆಯಲ್ಲಿ ಪುರುಷ ನಾಯಕರಿಗೆ ಅವಕಾಶವಿರಲಿಲ್ಲ. ವೇದಿಕೆಯ ಎಲ್ಲಾ ಕಡೆ ಸಂಪೂರ್ಣ ಕಾಂಗ್ರೆಸ್ ನಾಯಕಿಯರೇ ತುಂಬಿ ಹೋಗಿದ್ದರು. ಸಮಾವೇಶದ ಆರಂಭದಲ್ಲಿ ಜ್ಯೋತಿ ಬೆಳಗಿಸುವ ಕಾರ್ಯಕ್ರಮಕ್ಕೆ ಪುರುಷರನ್ನೂ ವೇದಿಕೆಗೆ ಆಹ್ವಾನ ಮಾಡಲಾಗಿತ್ತು. ಜ್ಯೋತಿ ಬೆಳಗಿಸಿ ವೇದಿಕೆಯಿಂದ ಕೆಳಗಿಳಿಯುವ ಹೊತ್ತಿನಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಿರೂಪಕಿಯ ಹಿಂದಿನಿಂದ ಪಾಸ್ ಆಗುತ್ತಿದ್ದರು. ಈ ಹಂತದಲ್ಲಿ ಅವರು ನಿರೂಪಕಿಯನ್ನು ದಿಟ್ಟಿಸಿ ನೋಡಿದ ರೀತಿ ಟ್ರೋಲ್ ಪೇಜ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿರ್ಗಮಿಸುವ ಹೊತ್ತಿನಲ್ಲಿ ಸಿದ್ಧರಾಮಯ್ಯ, ‘ಯಾರಪ್ಪಾ ಇವಳು ನಿರೂಪಕಿ..’ ಎನ್ನುವ ರೀತಿಯಲ್ಲಿ ಆಕೆಯನ್ನು ದಿಟ್ಟಿಸಿ ಮೇಲಿಂದ ಕೆಳಗಡೆ ದಿಟ್ಟಿಸಿ ನೋಡಿದರು. ಯಾಕಾಗಿ ಸಿದ್ಧರಾಮಯ್ಯ ಈ ರೀತಿ ಮಾಡಿದರು ಅನ್ನೋದು ಗೊತ್ತಿಲ್ಲ. ಇದನ್ನು ಅವರೇ ಸ್ಪಷ್ಟ ಮಾಡಿದರೆ ಗೊತ್ತಾಗಬಹುದು. ಕಾಂಗ್ರೆಸ್ ನಾಯಕಿಯೊಬ್ಬರ ಹೆಸರು ಹೇಳಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನಿರೂಪಕಿ ಹೇಳುವ ಹೊತ್ತಿನಲ್ಲಿ ಸಿದ್ಧರಾಮಯ್ಯ ನಿರೂಪಕಿಯಿಂದ ಹಿಂಭಾಗದಿಂದ ಪಾಸ್ ಆಗುತ್ತಾರೆ. ಈ ವೇಳೆ ಆಕೆಯನ್ನೇ ದಿಟ್ಟಿಸಿ ನೋಡುತ್ತಾರೆ. ಕಾರ್ಯಕ್ರಮದ ಆರಂಭದಿಂದಲೂ ನಿರೂಪಕಿ ವಿವರಗಳನ್ನು ನೀಡುತ್ತಿದ್ದ ಕಾರಣ, ಅವರು ಯಾರೆಂದು ಸಿದ್ಧರಾಮಯ್ಯ ಅವರಿಗೂ ಗೊತ್ತಿತ್ತು. ಬಹುಶಃ ಅವರನ್ನು ಸರಿಯಾಗಿ ಕಾಣುವ ಉದ್ದೇಶದಿಂದ ಹಾಗೆ ನೋಡಿರಬಹುದು ಎನ್ನುವುದು ಸದ್ಯದ ಅಂದಾಜು.ಈ ನಡುವೆ ಸಿದ್ದರಾಮಯ್ಯ ಅವರದು ‘ಮೆನ್ ವಿಲ್ ಬಿ ಮೆನ್’ ಮೂಮೆಂಟ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಕೆಲವರು ‘ದಿ ಬಾಯ್ಸ್’ ಮೂಮೆಂಟ್ ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನು ನಿರೂಪಕಿಗೂ ಕೂಡ ಸಿದ್ಧರಾಮಯ್ಯ ಅವರು ತಮ್ಮನ್ನು ನೋಡಿದ್ದು ಗೊತ್ತಾಗುತ್ತದೆ. ಅವರು ಏನಾದರೂ ತಪ್ಪಾಯಿತೇ ಎನ್ನುವಂತೆ ಅವರತ್ತ ನೋಡುತ್ತಾರೆ. ಸಿದ್ಧರಾಮಯ್ಯ ಮಾತ್ರ, ‘ಏನಮ್ಮಾ ನೀನು..’ ಅನ್ನೋ ಥರ ಸನ್ನೆ ಮಾಡಿ ಮುಂದೆ ಸಾಗುತ್ತಾರೆ. ಈ ವಿಡಿಯೋ ಈಗ ಕೆಲ ದಿನಗಳ ಕಾಲ ಟ್ರೆಂಡಿಂಗ್‌ನಲ್ಲಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
O chacha #Siddaramaiah pic.twitter.com/AZpEP1oWeX
— Lala (@FabulasGuy) January 16, 2023