March 20, 2026
WhatsApp Image 2025-11-29 at 12.55.31 PM

ಬಂಟ್ವಾಳ: ಮದುವೆಯ ತಯಾರಿಯಲ್ಲಿದ್ದ ಮನೆಯಿಂದ ಮದುಮಗಳು ನಾಪತ್ತೆಯಾದ ಘಟನೆ ಬಿಸಿರೋಡಿನ ಪಲ್ಲಮಜಲು ಎಂಬಲ್ಲಿ ನಡೆದಿದ್ದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶ್ಪಿಯ ( 21) ನಾಪತ್ತೆಯಾದ ಯುವತಿ.

ಡಿ.14 ರಂದು ಅಶ್ಪಿಯಳನ್ನು ಬಿ ಮೂಡ ಗ್ರಾಮದ ಬಂಟ್ವಾಳದ ಯುವಕನೋರ್ವನಿಗೆ ಮದುವೆ ಮಾಡುವುದಾಗಿ ಹಿರಿಯರೊಂದಿಗೆ ಮಾತುಕತೆ ಮಾಡಿ ಯುನಿಟಿ ಹಾಲ್ ಅಲ್ಲಿ ಮದುವೆ ನಿಶ್ಷಯಿಸಿರುತ್ತಾರೆ.

ಡಿ‌. 14 ರಂದು ಬೆಳಗ್ಗೆ ಸುಮಾರು 03:30 ಗಂಟೆ ತನಕ ಮನೆಯಲ್ಲೇ ಮಲಗಿದ್ದು ಆ ಬಳಿಕ ಬೆಳಿಗ್ಗೆ ಸುಮಾರು 04:30 ಗಂಟೆಗೆ ಬೆಳಗಿನ ಜಾವ ನೋಡಿದಾಗ ಅಕ್ಕನ ಮನೆಯಲ್ಲಿ ಇಲ್ಲದೇ ಇರುವುದು ತಿಳಿದು ಬಂದಿದೆ.

ಬಳಿಕ ಎಲ್ಲ ಕಡೆ ಹುಡುಕಾಡಿದರು ಸಿಗದೇ ಇರುವುದರಿದ ಈ ವೇಳೆಗೆ ತಡವಾಗಿ ಬಂದು ದೂರು ನೀಡುತ್ತಿರುವುದಾಗಿದೆ ಎಂದು ತಿಳಿಸಿದ್ದಾರೆ.ದೂರುದಾರರ ಅಕ್ಕ ಅಶ್ಪಿಯ ಎಂಬವಳನ್ನು ಹುಡುಕಿ ಕೊಡಬೇಕಾಗಿ ವೃತ್ತಿಯಲ್ಲಿ ಚಾಲಕನಾಗಿರುವ ಅರ್ಶದ್ ಎಂಬವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.