March 18, 2026
WhatsApp Image 2024-11-16 at 4.39.21 PM

ಉಡುಪಿ : ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಸೆನ್ ಪೊಲೀಸರು ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಕೆಜಿ ರೋಡ್‌ ಕ್ರಾಸ್‌ ಬಳಿ ಬಂಧಿಸಿದ್ದಾರೆ. ಉಪ್ಪೂರು ನಿವಾಸಿಗಳಾದ ಸತ್ಯರಾಜ್‌ (32), ಕೃಷ್ಣ (43) ಮತ್ತು ಶಕಿಲೇಶ್‌(25) ಬಂಧಿತರಾದ ಆರೋಪಿಗಳು.
ಆರೋಪಿಗಳು ಮುಂಬೈಯಿಂದ ತರಿಸಿಕೊಂಡಿದ್ದ ಗಾಂಜಾವನ್ನು ಕೆಜಿ ರೋಡ್ ನ ಕ್ರಾಸ್ ಬಳಿ ಸಾಗಾಟ ಮಾಡಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 8,11,040 ಮೌಲ್ಯದ 10 ಕೆ.ಜಿ 138 ಗ್ರಾಂ ತೂಕದ ಗಾಂಜಾವನ್ನು, 1,570 ನಗದನ್ನು, 3 ಮೊಬೈಲ್ ಸಹಿತ ಒಟ್ಟು 8,42,610 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವು ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.