December 6, 2025
WhatsApp Image 2025-10-16 at 5.01.50 PM

ಬೆಳ್ತಂಗಡಿ: ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘ ಉಜಿರೆ ಇದರ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ಪ್ರವೀಣ್ ಕ್ಷಿಪರ್ಡ್ ಪಾಯಸ್ ದೂರು ನೀಡಿದ್ದು, ಅಬ್ದುಲ್ ರಮೀಜ್ ಎಂಬಾತನು ಸೆ.9 ಮತ್ತು ಅ.8 ರಂದು ಸಹಕಾರ ಸಂಘಕ್ಕೆ ಬಂದು ಕ್ರಮವಾಗಿ 22.900 ಗ್ರಾಂ. ಮತ್ತು 33.910 ಗ್ರಾಂ. ತೂಕದ ಆಭರಣಗಳನ್ನು ಚಿನ್ನಾಭರಣವೆಂದು ನಂಬಿಸಿ ಅಡಮಾನ ಇಟ್ಟು 1,91,000 ರೂ. ಮತ್ತು 2,84,750 ರೂ ಸಾಲ ಪಡೆದುಕೊಂಡಿರುತ್ತಾನೆ.

ಅ.14 ರಂದು ಸಾಮಾಜಿಕ ಜಾಲತಾಣದಲ್ಲಿ ಅಬ್ದುಲ್ ರಮೀಜ್ ಇತರ ಹಣಕಾಸು ಸಂಸ್ಥೆಗಳಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ಮೋಸ ಮಾಡಿರುವ ವಿಚಾರ ತಿಳಿದು ಬಂದಿದೆ. ಶಾಖೆಯಲ್ಲಿ ಆತ ಅಡವಿಟ್ಟ ಚಿನ್ನಾಭರಣವನ್ನು ಮರು ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಠಾಣೆಗೆ ಅ.14 ರಂದು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.