March 21, 2026
WhatsApp Image 2024-06-16 at 2.58.59 PM
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾದ ಘಟನೆ ಬಂಟ್ವಾಳ ತಾಲೂಕಿನ ಪೊಳಲಿ ಕಮ್ಮಾಜೆ ಸಮೀಪದ ಕಾಗುಡ್ಡೆ ಎಂಬಲ್ಲಿ ಇಂದು ನಡೆದಿದೆ. ಬಿ.ಸಿ. ರೋಡಿನಿಂದ ಕಲ್ಪನೆ ಮಾರ್ಗವಾಗಿ ಕೊಳತ್ತಮಜಲು ಮೂಲಕ ಮಂಗಳೂರು ಸಂಚಾರ ಮಾಡುವ ಖಾಸಗಿ ಬಸ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಬಸ್ ನೊಳಗಿದ್ದ ಇಬ್ಬರು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.ಬಸ್‌ನ ಚಾಲಕ ಹಾಗೂ ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದಲ್ಲಿ ಬಸ್‌ನ ಮುಂಭಾಗದ ಗಾಜು ಪುಡಿಯಾಗಿದ್ದು, ಪ್ರಯಾಣಿಕರು ಬಸ್‌ನ ಮುಂಭಾಗದಿಂದ ಹೊರಬಂದಿದ್ದಾರೆ. ಆದಿತ್ಯವಾರ ಆದ ಕಾರಣ ಬಸ್ ನಲ್ಲಿ ಕೇವಲ ಎರಡು ಜನ ಮಾತ್ರ ಪ್ರಯಾಣಿಕರಿದ್ದು, ಅವರಿಗೆ ಯಾವುದೇ ಗಾಯಗಳು ಉಂಟಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.