March 20, 2026
16-05-2025akdv-1-150x150

ಬಂಟ್ವಾಳ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಅವರ ಧರ್ಮಪತ್ನಿ ಮತ್ತು ಮಕ್ಕಳೊಂದಿಗೆ ಬಂದು ಗುರುವಾರ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ ಪೂಜೆ ನೆರವೇರಿಸಿದರು.

ಶ್ರೀ ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಪವಿತ್ರಪಾಣಿ ಮಾಧವ ಭಟ್,ಕೆ ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಇವರ ಸಹಕಾರದೊಂದಿಗೆ ಪದ್ಮನಾಭ ಭಟ್ , ಅನಂತಪದ್ಮನಾಭ ಭಟ್ ,ಆದರ್ಶ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸುದೇಶ್ ರೈ, ಸದಾನಂದ ರೈ ಇದ್ದರು. ಈ ವೇಳೆ ಮಾತನಾಡಿದ ಸದಾನಂದ ಗೌಡ, ಅನಾರೋಗ್ಯದಿಂದ ಇದ್ದ ನನಗೆ ನನ್ನ ಆತ್ಮೀಯರೊಬ್ಬರು ಈ ಕ್ಷೇತ್ರಕ್ಕೆ ಬಂದು ಚಂಡಿಕಾಹೊಮ ಮಾಡಲು ತಿಳಿಸಿದರು. ಇದು ನನ್ನ ಭಾಗ್ಯ ನಾನು ಈಗ ಆರೋಗ್ಯದಿಂದಿದ್ದೇನೆ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದೀಜಿಗೆ ಹಾಗೂ ಗಡಿಕಾಯುವ ನಮ್ಮ ಸೈನಿಕರಿಗೆ ಒಳ್ಳೆಯ ಆರೋಗ್ಯ ನೀಡಲು ದೇವಿಯಲ್ಲಿ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ ಎಂದರು.

 

About The Author

Leave a Reply

Your email address will not be published. Required fields are marked *

You cannot copy content of this page.