ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವಂತ ರುಡ್ ಸೆಟ್ ಸಂಸ್ಥೆಯಿಂದ ಸ್ವ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವನ್ನು ಒದಗಿಸುತ್ತಿದೆ. ಉಚಿತವಾಗಿ ಎಸಿ, ರೆಫ್ರಿಜರೇಟರ್ ದುರಸ್ತಿ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದಂತ ಸುರೇಶ್ ಅವರು, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಪ್ರತಿಷ್ಠಾನ ಮತ್ತು ಕೆನರಾ ಬ್ಯಾಂಕ್ ಜೊತೆ ಯಾಗಿ 40 ವರ್ಷಗಳಿಂದ ಮುನ್ನಡೆಸುತ್ತಿರುವ ಉಜಿರೆಯ ರುಡ್ ಸೆಟ್ ಸಂಸ್ಥೆ ಯಲ್ಲಿ ಎಸಿ ಮತ್ತು ರೇಪ್ರಿಜರೇಟರ್ ದುರಸ್ತಿ ಉಚಿತ ತರಬೇತಿಯನ್ನು ದಿನಾಂಕ 25.01.2023 ರಿಂದ 23.02.2023 ರವರೆಗೆ ( 30 ದಿನಗಳು ) ನೀಡಲಾಗುವುದು ಎಂದು ತಿಳಿಸಿದ್ದಾರೆ.
ಉಟಿತರ ಎಸಿ, ರೆಫ್ರಿಜರೇಟರ್ ತರಬೇತಿಗಾಗಿ ಅರ್ಜಿಯೊಂದಿಗೆ ಗ್ರಾಮೀಣ ಅಭ್ಯರ್ಥಿಗಳು ಬಿಪಿಎಲ್ ಕಾರ್ಡ್ ನ ಜೆರಾಕ್ಸ್ ಪ್ರತಿ, ಎಪಿಎಲ್ ಕಾರ್ಡ್ ದಾರರು ಉದ್ಯೋಗ ಖಾತ್ರಿಯ ಜೆರಾಕ್ಸ್ ಪ್ರತಿ ಹಾಗೂ 6 ಪೋಟೋ, ಆಧಾರ್ ಕಾರ್ಡ್ ನ 2 ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು.
ಈ ತರಬೇತಿಗೆ ಅರ್ಜಿ ಸಲ್ಲಿಸೋದಕ್ಕೆ 18 ರಿಂದ 45 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ. ತರಬೇತಿಯ ಅವಧಿಯಲ್ಲಿ ಊಟ, ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಅರ್ಜಿಯನ್ನು ರುಡ್ ಸೆಟ್ ಸಂಸ್ಥೆ,, ಉಜಿರಿ -574240ಗೆ ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ 08256 236404, 9902594791, 9591044014, 9980885900, 9448484237 ಗೆ (ಪೋನ್ ಮಾಡುವ ಸಮಯ ಬೆಳಿಗ್ಗೆ 09:30 ರಿಂದ ಸಂಜೆ 06:00 ಗಂಟೆ ಒಳಗಡೆ ಮಾಡಬೇಕಾಗಿ ವಿನಂತಿ) ಸಂಪರ್ಕಿಸಬಹುದಾಗಿದೆ. ಅಲ್ಲದೇ ರುಡ್ ಸೆಟ್ ಸಂಸ್ಥೆಯ ಅಧಿಕೃತ ಜಾಲತಾಣ www.rudsetitraining.org ಗೆ ಭೇಟಿ ನೀಡಿಯೂ ಮಾಹಿತಿಯನ್ನು ಪಡೆಯಬಹುದಾಗಿದೆ.