ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಭುವನೇಂದ್ರ ಕಾಲೇಜ್ ಬಳಿ ಇರುವ ದಾನೀಯ ಪಿರೇರಾ ಪಟ್ಲ ಹೌಸ್ ಎಂಬ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಗೋವರ್ಧನ, ಉಪೇಂದ್ರ ನಾಯ್ಕ, ದೀಪಾ ಉಡುಪಿ, ಅಶೋಕ ಕಾರ್ಕಳ ಪ್ರವೀಣ ಕುಮಾರ್ ಆರೋಪಿಗಳಾಗಿದ್ದು, ಈ ಪೈಕಿ ಉಪೇಂದ್ರ ನಾಯ್ಕ ಮತ್ತು ಪ್ರವೀಣ ಎಂಬವರನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.