
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸೌರಮಾನ ಪದ್ಧತಿಯ ಪ್ರಕಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಮತ್ತು ವೈಭವದಿಂದ ಆಚರಿಸಲಾಯಿತು.
ಪುತ್ತಿಗೆ ಮಠದ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಗಳು ದಿನವಿಡೀ ಉಪವಾಸ, ಧ್ಯಾನ, ಜಪಾನುಷ್ಠಾನದಲ್ಲಿ ಕಳೆದು, ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯಪ್ರದಾನ ನೆರವೇರಿಸಿದರು. ನಂತರ ವ್ರತ ಕೊನೆಗೊಳಿಸಿದರು. ಕೃಷ್ಣಮಠದಲ್ಲಿ ಶ್ರೀ ಕೃಷ್ಣನ ಹುಟ್ಟುಹಬ್ಬದ ಪ್ರಯುಕ್ತ ಪರ್ಯಾಯ ಪುತ್ತಿಗೆ ಮಠದ ಶ್ರೀಗಳು ಕೃಷ್ಣನಿಗೆ ಬಾಲಕೃಷ್ಣನ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ತೀರ್ಥ ಮಂಟಪದಲ್ಲಿ ಚಿನ್ನದ ತೊಟ್ಟಿಲಿನಲ್ಲಿ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯರಾತ್ರಿ 12.11 ರ ಸುಮಾರಿಗೆ ಈ ಆಚರಣೆಯನ್ನು ನೆರವೇರಿಸಲಾಯಿತು. ನಂತರ, ಭಕ್ತರಿಗೆ ಭಕ್ತಿಯಿಂದ ಭಗವಂತನಿಗೆ ಅರ್ಘ್ಯ ಅರ್ಪಿಸಲು ಅವಕಾಶ ನೀಡಲಾಯಿತು.
