March 19, 2026
WhatsApp Image 2025-09-14 at 12.26.17 PM
ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಜ್ವಲ್ ಯುವಕ ಮಂಡಲ (ರಿ ) ಸೂಟರ್ ಪೇಟೆ ಹಾಗೂ ಶಾಸಕರಾದ ಡಿ.ವೇದವ್ಯಾಸ ಕಾಮತ್ ಇವರ ಸಹಕಾರದೊಂದಿಗೆ ಮತ್ತು ಅಸ್ತ್ರ ಗ್ರೂಪ್ ಸಿಇಓ ಲಂಚುಲಾಲ್ ಇವರ ಪ್ರಧಾನ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 26 , 2025 ರಂದು ಎಕ್ಕೂರಿನ ಫಿಷರೀಸ್ ಕಾಲೇಜಿನಲ್ಲಿ ನಡೆಯುವ “ಬಲೇ ಗೊಬ್ಬುಗ ಕೆಸರ್ ಡೊಂಜಿ ದಿನ” ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಬಿಡುಗಡೆಯನ್ನು ಮಾನ್ಯ ಶಾಸಕರಾದ ಡಿ.ವೇದವ್ಯಾಸ ಕಾಮತ್ ಜರುಗಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವ ಸಲಹೆಗಾರರಾದ ಕೆ.ಕೆ ಪೇಜಾವರ, ಯು.ಬಿ ಪ್ರಥ್ವಿರಾಜ್ ಬಂಗೇರ ಹಾಗೂ ಅಧ್ಯಕ್ಷರಾದ ಲೋಕೇಶ್ ಎಸ್ ಮತ್ತು ಸದಸ್ಯರಾದ ಅಭಿಲಾಷ್ ,ಶರತ್,ವಿವೇಕ್, ಸುರಕ್ಷಿತ್, ಸೃಜನ್ ಮಾನವ್ ಮುಂತಾದವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೆಳಕಂಡ ಸ್ಪರ್ಧೆಗಳು ನಡೆಯಲಿದ್ದು ಸಾರ್ವಜನಿಕರಿಗೆ ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ ಎಂದು ಸಮಿತಿಯು ತಿಳಿಸಿದೆ. ಮಕ್ಕಳ ವಿಭಾಗ – ವಯಸ್ಸು 1 ರಿಂದ 4 – ಕೆಸರು ಓಟ, ಹಿಮ್ಮುಖ ಓಟ, ಬಾಟ್ಲಿಗೆ ನೀರು ತುಂಬಿಸುವುದು ವಯಸ್ಸು 5 ರಿಂದ 8 – ಕೆಸರು ಓಟ, ಹಿಮ್ಮುಖ ಓಟ, ಕಂಬಳ ಓಟ, ಪಾಲೆ ಬಂಡಿ ವಯಸ್ಸು 8 ರಿಂದ 10 – ಕೆಸರು ಓಟ, ಹಿಮ್ಮುಖ ಓಟ, ಕಂಬಳ ಓಟ, ಪಾಲೆ ಬಂಡಿ ಹುಡುಗರಿಗೆ – ಕೆಸರು ಓಟ, ರಿಲೇ ಓಟ, ಹಿಮ್ಮುಖ ಓಟ, ಗೂಟ ಸುತ್ತುವ ಓಟ ಗಂಡಸರಿಗೆ – ಕೆಸರು ಓಟ, ರಿಲೇ ಓಟ, ಹಿಮ್ಮುಖ ಓಟ ಹುಡುಗಿಯರಿಗೆ – ಕೆಸರು ಓಟ, ರಿಲೇ ಓಟ, ಕೊಡಪಾನಕ್ಕೆ ನೀರು ತುಂಬಿಸುವುದು ಹೆಂಗಸರಿಗೆ – ಕೆಸರು ಓಟ, ರಿಲೇ ಓಟ, ಕೊಡಪಾನಕ್ಕೆ ನೀರು ತುಂಬಿಸುವುದು ಗಂಡ ಹೆಂಡತಿ – ಉಪ್ಪು ಮೂಟೆ ಸಾರ್ವತ್ರಿಕ – ಮಡಕೆ ಒಡೆಯುವುದು ನಿಧಿ ಶೋಧ ( ಬಂಗಾರದ ನಾಣ್ಯ)
ತಂಡ ಸ್ಪರ್ಧೆಗಳು – ಪುರುಷರಿಗೆ/ ಮಹಿಳೆಯರಿಗೆ ವಾಲಿಬಾಲ್ / ಹಗ್ಗ ಜಗ್ಗಾಟ ತ್ರೋಬಾಲ್ / ಹಗ್ಗ ಜಗ್ಗಾಟ [ ಪ್ರಥಮ – 10,000 + ಟ್ರೋಫಿ ] [ ದ್ವೀತಿಯ – 5,000 + ಟ್ರೋಫಿ] ತಂಡ ಸ್ಪರ್ಧೆಗಳ ಪ್ರವೇಶ ಶುಲ್ಕ ಪುರುಷರಿಗೆ – 1000 ಮಹಿಳೆಯರಿಗೆ – 750

About The Author

Leave a Reply

Your email address will not be published. Required fields are marked *

You cannot copy content of this page.