ಉಡುಪಿ: ಅಶ್ವಜಿತ್ ಎನ್ನುವ ವ್ಯಕ್ತಿ ಬಿಲ್ಲವ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನಲೆಯಲ್ಲಿ ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಇದೀಗ ಬಿಲ್ಲವ ಸಮಾಜದ ಪ್ರಮುಖರು ಪ್ರಕರಣ ದಾಖಲು ಮಾಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಬಿಲ್ಲವ ಸಮಾಜದ ಸಂಘಟನೆಗಳಿಗೂ ಮನವಿ ನೀಡಲಾಗಿದೆ. ಈಗಾಗಲೇ ಸಂತ್ರಸ್ತೆ ಉಡುಪಿ ಮಹಿಳಾ ಠಾಣೆಯಲ್ಲಿ 5 ಜನ ತಪ್ಪಿತಸ್ಥರ ವಿರುದ್ಧ ದೂರು ನೀಡಿ, ಸಿ ಅಶ್ವಜೀತ್ ಹೊರತುಪಡಿಸಿ ಉಳಿದವರು ಕ್ಷಮೆಯಾಚಿಸಿರುತ್ತಾರೆ. ಆದರೆ ಒಣ ಪ್ರತಿಷ್ಠೆ, ದುಡ್ಡಿನ ಮದದಿಂದ ನಾನು ಯಾಕೆ ಕ್ಷಮೆ ಕೇಳಬೇಕು, ನಾನು ದೊಡ್ಡ ಸಿಎ ಎನ್ನುವ ಉದ್ಧಟನವನ್ನು ತೋರಿರುತ್ತಾರೆ. ಹಲವಾರು ಜನ ಇವರಿಗೆ ಬುದ್ಧಿ ಹೇಳಿದರೂ ಕ್ಯಾರೆ ಎನ್ನದೆ ನಾನು ಗುರುಗಳಿಗಿಂತ ದೊಡ್ಡವನು ಎನ್ನುವ ರೀತಿ ದುರ್ವರ್ತನೆ ತೋರಿರುತ್ತಾರೆ. ಸಾಕಷ್ಟು ಕಾಲಾವಕಾಶ ನೀಡಿದರೂ ಗುರುಗಳಲ್ಲಿ ಕ್ಷಮೆ ಯಾಚಿಸಿಲ್ಲ ಎಂದರೆ ಇದು ದುರಹಂಕಾರದ ಪರಮವಾಧಿ ಅಲ್ಲವೇ? ಆದ್ದರಿಂದ ಸೆಪ್ಟೆಂಬರ್ 17ರಂದು ಗುರುಗಳ ಅನುಯಾಯಿಗಳು, ಹಲವಾರು ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಎ ಅಶ್ವಜಿತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಎನ್ ಎಐ ಅಧ್ಯಕ್ಷ ಕಿರಣ್ ಪೂಜಾರಿ ತಿಳಿಸಿದ್ದಾರೆ.