March 18, 2026
WhatsApp Image 2024-07-14 at 12.13.59 PM

ಬಂಟ್ವಾಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ನುಗ್ಗಿ ಮನೆಯಲ್ಲಿದ್ದ ಸುಮಾರು 4.14 ಲಕ್ಷ ರೂ. ಮೌಲ್ಯದ 69 ಗ್ರಾಂ. ಚಿನ್ನಾಭರಣ ಕಳವುಗೈದ ಘಟನೆ ಬಂಟ್ವಾಳದ ಇರಾ ಗ್ರಾಮದ ಕಿನ್ನಿಮಜಲುವಿನಲ್ಲಿ ನಡೆದಿದೆ.

ಕಿನ್ನಿಮಜಲು ನಿವಾಸಿ ವನಿತಾ ಅವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಅವರ ಮನೆ ಮಂದಿ ಕೆಲಸಕ್ಕೆ ಹೋಗಿದ್ದರು ಈ ವೇಳೆ ಕಳ್ಳರು ಒಳ ನುಗ್ಗಿ ಚಿನ್ನಾಭರಣ ದೋಚಿದ್ದಾರೆ ಎಂದು ತಿಳಿದುಬಂದಿದೆ.
ಕಳ್ಳರು ಮುಂಬಾಗಿಲ ಬೀಗ ಮುರಿದಿರುವುದನ್ನು ಕಂಡ ವನಿತಾ ಅವರ ಅಕ್ಕ ಸುಜಾತ ಅವರು, ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಮನೆಗೆ ಬಂದ ವನಿತಾ ಅವರು ಒಳಗೆ ಹೋಗಿ ನೋಡಿದಾಗ, ರೂಮಿನಲ್ಲಿದ್ದ ಕಪಾಟು ಖಾಲಿಯಾಗಿದ್ದು, ಅದರಲ್ಲಿದ್ದ ಬಟ್ಟೆಗಳ್ಳೆಲ್ಲಾ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಜೊತೆಗೆ ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ಕಳ್ಳರು ದೋಚಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಇನ್ಸ್ಪೆಕ್ಟರ್ ಶಿವಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.