December 22, 2024
WhatsApp Image 2024-07-14 at 4.32.19 PM

ಉಡುಪಿ: ಜಿಲ್ಲೆಯ ಸಮಾಜ ಸೇವಕ, ಆಪತ್ಭಾಂದವ ಎಂದೇ ಖ್ಯಾತಿ ಪಡೆದುಕೊಂಡಿರುವ ಆಸೀಫ್​ನ ನೀಚ ಕೃತ್ಯ ಬಟಾಬಯಲಾಗಿದೆ. ಸ್ವಂತ ಪುತ್ರಿಯ ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿದ್ದಾನೆ.

ಪಡುಬಿದ್ರಿಯಲ್ಲಿ ತನ್ನ ಸ್ವಂತ ಪುತ್ರಿಯ ಖಾಸಗಿ ವಿಡಿಯೋಗಳನ್ನೇ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ವಾಟ್ಸಾಪ್ ಗ್ರೂಪ್​ಗಳಲ್ಲಿ ಹರಿಬಿಟ್ಟಿರುವ ಆರೋಪ ಕೇಳಿಬಂದಿದೆ. ಈ ಕುರಿತು ಪತಿ ವಿರುದ್ಧ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಬೆನ್ನಲ್ಲೇ ಆರೋಪಿಯ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಮೂಲದ ಸಮಾಜ ಸೇವಕ ಆಸೀಫ್ ಮಗಳ ಪ್ರೀತಿ ವಿಚಾರ ತಿಳಿದು ಪತ್ನಿ ಮತ್ತು ಪುತ್ರಿಯನ್ನು ಯದ್ವತದ್ವ ತಳಿಸಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗಳ ಪ್ರೀತಿಯ ವಿಚಾರ ಗೊತ್ತಾಗಿ ಆಸೀಫ್‌ಗೆ  ಕೆಂಡಾಮಂಡಲನಾಗಿದ್ದು, ಇದೇ ಸಿಟ್ಟಿನಲ್ಲಿ ಅಮಾನುಷವಾಗಿ ಮಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ನಡುವೆ ಬಂದ ಪತ್ನಿಯನ್ನೂ ಸಹ  ಕಾಲಿನಲ್ಲಿ ತುಳಿದು ಹಲ್ಲೆ ಮಾಡಿದ್ದಾನೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ವೈರಲ್ ಆಗಿದೆ. ಆಸೀಫ್​ನ ಪುತ್ರಿ ತೀರ್ಥಹಳ್ಳಿಯ ತಮ್ಮ ಸಂಬಂಧಿ ಆಗಿರುವ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಇದು ಯುವತಿಯ ತಂದೆಗೆ ಇಷ್ಟವಿರಲಿಲ್ಲ. ಈ ಕೋಪದಿಂದ ಪುತ್ರಿಯ ಫೋಟೋ, ವಿಡಿಯೋಗಳನ್ನು ಸಂಬಂಧಿ ಹುಡುಗನ ಜೊತೆಗಿನ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ್ದಾನೆ. ಅಲ್ಲದೇ ಮಗಳು ಪ್ರೀತಿಸುತ್ತಿದ್ದ ಹುಡಗನನ್ನು ಮನೆಗೆ ಕರೆಸಿ ಆತನ ಮೇಲೆ ಹಲ್ಲೆ ಮಾಡಿದ್ದನಂತೆ. ಬಳಿಕ ಆ ಹುಡುಗನ ಮತ್ತು ತನ್ನ ಮಗಳ ಫೋನ್​ಗಳನ್ನು ಕಸಿದುಕೊಂಡು ಅದರಲ್ಲಿದ್ದ ವಿಡಿಯೋಗಳನ್ನು ತನ್ನ ಫೋನ್​ಗೆ ವರ್ಗಾಯಿಸಿಕೊಂಡು ಅವುಗಳನ್ನು ಅಶ್ಲೀಲವಾಗಿ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿವಿಧ ವಾಟ್ಸಾಪ್ ಗ್ರೂಪ್​ಗಳಿಗೆ ಕಳುಹಿಸಿದ್ದಾನೆ ಎಂದು ಅರೋಪಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.