March 19, 2026
WhatsApp Image 2025-05-13 at 10.48.14 AM

ಉಡುಪಿ: ನಿಟ್ಟೂರು ಶಾಲೆಯ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ಇನ್ಸುಲೇಟ‌ರ್ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದು ಸಂಭವಿಸಿದ್ದು, ಚಾಲಕ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಉಡುಪಿಯಿಂದ ಸಂತೆಕಟ್ಟೆ ಹೋಗುವ ಮಾರ್ಗದಲ್ಲಿ ತಾಂಗದಗಡಿ ಸಮೀಪ ಉತ್ತರ ಪ್ರದೇಶ ನೋಂದಣಿಯ ಕಾರೊಂದು ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಕಾರು ರಸ್ತೆಗೆ ಅಡ್ಡವಾಗಿದ್ದ ಪರಿಣಾಮ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.

 

About The Author

Leave a Reply

Your email address will not be published. Required fields are marked *

You cannot copy content of this page.