March 21, 2026
WhatsApp Image 2024-05-06 at 2.23.59 PM
ಉಡುಪಿ:  ಮಣಿಪಾಲದ ವಾಗ್ಷಾದಲ್ಲಿ ಮೂರನೇ ವರ್ಷ ಬಿಎ (ಕಲ್ನರಿ ಆರ್ಟ್ಸ್) ವಿದ್ಯಾರ್ಥಿಯಾಗಿರುವ ಬೆಂಗಳೂರಿನ ಹಿತೇಂದ್ರ (26)  ತಾನು ವಾಸವಾಗಿದ್ದ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂರು ದಿನಗಳ ಹಿಂದೆ ತಾಯಿಗೆ ಕರೆ ಮಾಡಿದ್ದ ಹಿತೇಂದ್ರ, ಪರೀಕ್ಷೆಯನ್ನು ಚೆನ್ನಾಗಿ ಮಾಡದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ. ತಾಯಿ ಧೈರ್ಯ ತುಂಬಿದ ಬಳಿಕ ಮುಂದೆ ಸರಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಎಂದು ಹಿತೇಂದ್ರ ತಂದೆ ಲಕ್ಷ್ಮೀನರಸಿಂಹ ತಿಳಿಸಿದ್ದಾರೆ.
ಕಾಲೇಜಿನ ಉಪಪ್ರಾಂಶುಪಾಲರು ತನಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದು, ಇಂದು ಬೆಳಗ್ಗೆ ಬಂದು ರೂಮಿನ ಬಾಗಿಲು ತೆಗೆದುನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದ ಎಂದರು.
ಮೇ 8ರ ಬೆಳಗ್ಗೆ 7ರಿಂದ 10ರ ರಾತ್ರಿ 8:40ರ ನಡುವೆ ಘಟನೆ ನಡೆದಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.