ಐತಿಹಾಸಿಕ ಕೀಳಂಜೆ ದೇವಸ್ಥಾನ : ಮುಷ್ಟಿ ಕಾಣಿಕೆ ಸಮರ್ಪಣೆ

ಪುರಾತನ ಪ್ರಸಿದ್ಧ 8 ನೇ ಶತಮಾನದ ಗಾಲವ ಋಷಿ ತಪಸ್ಸು ಮಾಡಿದ್ದ ಕೀಳಂಜೆ ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಹರಿಹರ ತೀರ್ಥದ ಸಮಗ್ರ ಜೀರ್ಣೋದ್ಧಾರ ಪ್ರಯುಕ್ತ ಮುಷ್ಟಿ ಕಾಣಿಕೆಯಾದಿ ಪ್ರಾಯಶ್ಚಿತ್ತ ಹೋಮಾದಿಗಳು
ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ
ಶ್ರೀ ಪಾದಂಗಳವರ ಆಶೀರ್ವಾದದೊಂದಿಗೆ
22 ಜನವರಿ 2024 ರಿಂದ ಪ್ರಾರಂಭವಾಗಲಿದೆ .

22.01.2024 ರ ಸೋಮವಾರದಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ , ಗಣಹೋಮ , ಭದ್ರದೀಪ ಸಮರ್ಪಣೆ ,ಮುಷ್ಟಿ ಕಾಣಿಕೆ ,
ಮೃತ್ಯುಂಜಯ ಹೋಮ ಹಾಗು ಇತರ ಹೋಮಗಳು , 23.01.2024 ರ ಮಂಗಳವಾರದಂದು ಬೆಳಿಗ್ಗೆ ನವಕ ಪ್ರಧಾನ ಹೋಮ , ನವಗ್ರಹ ಶಾಂತಿ , ಸಂಜೆ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ .

ಹಾಗೆಯೇ 31.01.2024 ರ ಬುಧವಾರ ಸರ್ಪ ಸಂಸ್ಕಾರ ಕ್ರಿಯೆಯ ಮಂಗಳ , ಆಶ್ಲೇಷ ಬಲಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ .

ಎಲ್ಲಾ ದೇವತಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು ಮನ ಧನ ಗಳಿಂದ ಸಹಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ .

Check Also

ಮೆದುಳು ತಿನ್ನೋ ಅಮೀಬಾ ಸೋಂಕಿಗೆ 14 ವರ್ಷದ ಬಾಲಕ ಮೃತ್ಯು; 3ನೇ ಪ್ರಕರಣ

ಕೋಝೀಕೋಡ್(ಕೇರಳ): ಕೇರಳದ ಖಾಸಗಿ ಆಸ್ಪತ್ರೆಯೊಂದರಲ್ಲಿ 14 ವರ್ಷದ ಬಾಲಕನೊಬ್ಬ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌(ಮಿದುಳು ತಿನ್ನುವ ಅಮೀಬಾ) ಎಂಬ ಅಪರೂಪದ ಮಿದುಳು ಸೋಂಕಿನಿಂದ ಕೊನೆಯುಸಿರೆಳೆದಿರುವುದಾಗಿ …

Leave a Reply

Your email address will not be published. Required fields are marked *

You cannot copy content of this page.