November 22, 2024
WhatsApp Image 2024-10-12 at 5.44.28 PM

ಸಂತ ಆಗ್ನೆಸ್ ಸ್ವಾಯತ್ತ ಕಾಲೇಜು, ಮಂಗಳೂರು 2024-25 ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ತನ್ನ ವಾರ್ಷಿಕ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೋತ್ಸವ “ವೈಬ್ರಾಂಝಾ 2024” ಅನ್ನು 2024ರ ಅಕ್ಟೋಬರ್ 10 ರಂದು ಅನಾವರಣಗೊಳಿಸಲಾಯಿತು. ಇದು ಪದವಿ ಮತ್ತು ಪದವಿ ಪೂರ್ವ ಮಟ್ಟದ ವಿದ್ಯಾರ್ಥಿಗಳಿಗೆ ನಡೆಸಲಾಗುವ ಸಾಂಸ್ಕೃತಿಕ ಸ್ಪರ್ಧೋತ್ಸವ.

ಕಾಲೇಜು ಪ್ರಾಂಶುಪಾಲೆ ಸಿಸ್ಟರ್ ಡಾ. ಎಮ್ ವೆನಿಸ್ಸಾ ಎ ಸಿ ಅವರು ವಿದ್ಯಾರ್ಥಿ ಕ್ಯಾಬಿನೆಟ್, ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿ ಸಮೂಹದ ಉಪಸ್ಥಿತಿಯಲ್ಲಿ ಹಸ್ತಾಕ್ಷರದಲ್ಲಿ ತಯಾರಿಸಿದ ಬ್ಯಾನರ್‌ನಲ್ಲಿ ಸ್ಪರ್ಧೋತ್ಸವದ ಲೋಗೋ ಮತ್ತು ಶೀರ್ಷಿಕೆಯನ್ನು ಅನಾವರಣಗೊಳಿಸಿದರು.

ಕಾಲೇಜಿನ ವಿದ್ಯಾರ್ಥಿಗಳು ಹಿನ್ನಲೆ ಸಂಗೀತಕ್ಕೆ ನೃತ್ಯ ಮಾಡುವ ಮೂಲಕ ‘ವೈಬ್ರಾಂಝಾ’ ಬ್ಯಾನರ್ ಅನಾವರಣ ಕಾರ್ಯಕ್ರಮ ಆರಂಭಗೊಂಡಿತು.

ಬಿಬಿಎ ವಿಭಾಗದ ಪ್ರಾಧ್ಯಾಪಕಿ ಸಬೀನಾ ಡಿ’ಸೋಜಾ ಅವರು ಈ ಸ್ಪರ್ಧೆಯ ಸ್ಟಾಫ್ ಕೋ-ಆರ್ಡಿನೇಟರ್ ಆಗಿದ್ದು, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

“ಬದಲಾವಣೆಯ ಬೀಜಗಳು” (ಸೀಡ್ಸ್ ಆಫ್ ಚೇಂಜ್) ಎಂಬ ನೃತ್ಯ ನಾಟಕ ಸ್ಪರ್ಧೆ ಸಾರ್ವಜನಿಕವಾಗಿದ್ದು, ಯಾರು ಬೇಕಾದರೂ ಭಾಗವಹಿಸಬಹುದಾಗಿರುತ್ತದೆ. ಈ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು ಅದರ ವಿವರಗಳು ಸಂತ ಆಗ್ನೆಸ್ ಸ್ವಾಯತ್ತ ಕಾಲೇಜಿನ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಎಲ್ಲರಿಗೂ ಈ ಸ್ಪರ್ಧೋತ್ಸವದಲ್ಲಿ ಭಾಗಿಯಾಗಲು ಆಹ್ವಾನಿಸಲಾಗುತ್ತದೆ, ತಮ್ಮ ಪ್ರತಿಭೆಗಳನ್ನು ತೋರಿಸಲು ಮತ್ತು ಆಕರ್ಷಕ ಬಹುಮಾನಗಳನ್ನು ಗೆಲ್ಲಲು ಅವಕಾಶವನ್ನು ಪಡೆಯಬಹುದು ಎಂದು ವಿವರಣೆಗಳನ್ನಿತ್ತರು.

ಈ ಸ್ಪರ್ಧೋತ್ಸವದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ದಾಖಲಾತಿಗೆ ಸಂಬಂಧಿಸಿದಂತೆ ಸಬೀನಾ ಡಿ’ಸೋಜಾ (ಪ್ರಾಧ್ಯಾಪಕ ಸಂಪರ್ಕ +91 89049 16108) ಅಥವಾ ಪ್ರಿವಿ ಡಿ’ಸೋಜಾ (ವಿದ್ಯಾರ್ಥಿ ಅಧ್ಯಕ್ಷ +91 82176 67824) ಅವರನ್ನು ಸಂಪರ್ಕಿಸಬಹುದು.

About The Author

Leave a Reply

Your email address will not be published. Required fields are marked *

You cannot copy content of this page.