
ಉಡುಪಿ : ಲಾರಿಯಲ್ಲಿ 65 ಕೆ.ಜಿ. ಗಾಂಜಾವನ್ನು ಸಾಗಿಸುತ್ತಿದ್ದ ಅರೋಪಿಗಳನ್ನು ಸೆನ್ ಅಪರಾಧ ಠಾಣೆಯ ಪೊಲೀಸರು ಉಡುಪಿಯ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಧಿಸಿದ್ದಾರೆ.
ಹುಣಸೂರಿನ ಗಣೇಶ(38), ಆಂಧ್ರದ ಅನಂತಪುರಂನ ಪಿ. ಗೋಪಾಲ ರೆಡ್ಡಿ(43) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಲಾರಿಯನ್ನು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 32 ರಿಂದ 50 ಲಕ್ಷ ರೂ. ಮೌಲ್ಯದ 65 ಕೆಜಿ 39 ಗ್ರಾಂ ಗಾಂಜಾ, ಗೂಡ್ಸ್ ಲಾರಿ, 2 ಮೊಬೈಲ್ ಪೋನ್ ಗಳು, 1520 ರೂ. ನಗದು ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಮೌಲ್ಯ 72 ಲಕ್ಷದ 21 ಸಾವಿರದ 520 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ NDPS Act 1985 ರಂತೆ ಪ್ರಕರಣ ದಾಖಲಾಗಿದೆ.
