ಮಂಗಳೂರು: ವಿದ್ಯಾರ್ಥಿಗಳ ಪೋಷಕರಿಗೆ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ..! ಹಣಕ್ಕಾಗಿ ಬೇಡಿಕೆ

ಸುರತ್ಕಲ್: ಪೊಲೀಸ್ ಅಧಿಕಾರಿಗಳೆಂದು ಹೇಳಿ ವಿದ್ಯಾರ್ಥಿಗಳ ಹೆತ್ತವರಿಗೆಗೆ ಕರೆ ಮಾಡಿ ಹಣ ಪೀಕಿಸುವ ತಂಡದಿಂದ ಸುರತ್ಕಲ್‌ನಲ್ಲಿ ಹಲವರಿಗೆ ಕರೆ ಬಂದಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಿಮ್ಮ ಮಕ್ಕಳು (ಮಗ) ಸಿಕ್ಕಿ ಹಾಕಿಕೊಂಡಿದ್ದಾರೆ. ಅವರನ್ನು ಬಿಡುಗಡೆ ಮಾಡ ಬೇಕಾದರೆ 5 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸುರತ್ಕಲ್‌ನ ವಿದ್ಯಾರ್ಥಿಗಳ ಕೆಲವು ಪೋಷಕರಿಗೆ ಈ ಕರೆ ಬಂದಿದ್ದು ಕೂಡಲೇ ಪೋಷಕರು ಕಾಲೇಜಿಗೆ ಕರೆ ಮಾಡಿ ತಮ್ಮ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ. ಆ ಸಂದರ್ಭ ವಿದ್ಯಾರ್ಥಿಗಳು ಕಾಲೇಜಿನಲ್ಲೇ ಇದ್ದ ಕಾರಣ. ಇದು ನಕಲಿ ಕರೆ ಎಂದು ಮನದಟ್ಟಾಗಿದೆ. ಈ ರೀತಿ ಸುರತ್ಕಲ್‌ನಲ್ಲಿ ಮೂರು ನಾಲ್ಕು ಜನರಿಗೆ ಕರೆ ಬಂದಿದೆ ಎನ್ನಲಾಗಿದೆ. 923354533015 ನಂಬರ್‌ನಿಂದ ಕರೆ ಬಂದಿದ್ದು ಟ್ರೂ ಕಾಲರ್‌ನಲ್ಲಿ ಚೆಕ್ ಮಾಡುವಾಗ ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬರ ಫೋಟೋ ಇದರಲ್ಲಿ ಇದೆ. ಈ ಬಗ್ಗೆ ಅಧಿಕೃತವಾಗಿ ದೂರು ದಾಖಲಾಗದಿದ್ದರೂ ಸಾರ್ವಜನಿಕರು ಜಾಗೃತರಾಗಬೇಕಾಗಿದೆ. ನಕಲಿ ಅಧಿಕಾರಿಗಳು ಕರೆ ಮಾಡಿ ಬೆದರಿಸಿರುವ ಬಗ್ಗೆ ಕೆಲವರು ದೂರಿದ್ದಾರೆ. ಪ್ರಕರಣ ದಾಖಲಾಗಿಲ್ಲ ಸೆನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ರೀತಿಯ ಕರೆಗಳಿಂದ ಯಾರೂ ಆತಂಕಗೊಳ್ಳಬೇಕಿಲ್ಲ. ಇದು ನಕಲಿ ಕರೆ ಇಂತಹ ಕರೆ ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಹೇಳಿದ್ದಾರೆ.

Check Also

ಕಾರವಾರ: ಮಳೆಗೆ ಗುಡ್ಡ ಕುಸಿದು ʻಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ʼ ಬಂದ್ : ವಾಹನ ಸವಾರರ ಪರದಾಟ

ಕಾರವಾರ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಕಾರವಾರ-ಬೆಂಗಳುರು ರಾಷ್ಟ್ರೀಯ ಹೆದ್ದಾರಿ ಸಂಚಾರ …

Leave a Reply

Your email address will not be published. Required fields are marked *

You cannot copy content of this page.