ಕಾರ್ಕಳ: ಮಗುವಿನೊಂದಿಗೆ ತಾಯಿ ನಾಪತ್ತೆ

ಕಾರ್ಕಳ:  ಈದು ಗ್ರಾಮದ ವರಿಮಾರು ದರ್ಖಾಸು ಮನೆಯಲ್ಲಿ ವಾಸವಿದ್ದ ತಾಯಿ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ.
ನಾಪತ್ತೆಯಾದ ಮಹಿಳೆಯನ್ನು ಶಿವಾನಂದ ಎಂಬವರ ಹೆಂಡತಿ ಅಶ್ವಿನಿ ಎಸ್‌. (28) ಹಾಗೂ ಅವರ ಏಳೂವರೆ ವರ್ಷದ ಮಗು ಆಶಿಕ್‌ ಎಂದು ಗುರುತಿಸಲಾಗಿದೆ.

 

 

ಹೊಸ್ಮಾರು ಅಡಿಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಶ್ವಿನಿ ಜೂ.11ರಂದು ಮಧ್ಯಾಹ್ನ 2.50ಕ್ಕೆ ಚಿಕ್ಕಮನ ಮಗಳು ರಶ್ಮಿತಾರಲ್ಲಿ ಮಂಗಳೂರಿನಲ್ಲಿರುವ ತಂಗಿ ಮೈನಾಳ ಮಗುವಿಗೆ ಹುಷಾರಿಲ್ಲದೆ ಇದ್ದು, ಮಂಗಳೂರಿಗೆ ಹೋಗಿ ಬರುವುದಾಗಿ ತಿಳಿಸಿ ಮಗುವಿನೊಂದಿಗೆ ಹೋದವರು  ತಂಗಿಯ ಮನೆಗೂ ಹೋಗದೆ ವಾಪಸ್ಸು ತನ್ನ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ.

 

 

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಮಾಹಿತಿ ಸಿಕ್ಕಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.

Check Also

ಉಡುಪಿ:ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆ ಮಧ್ಯೆ ಪಲ್ಟಿಯಾದ ಘಟನೆ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೆಳಗ್ಗೆ 7ಗಂಟೆ …

Leave a Reply

Your email address will not be published. Required fields are marked *

You cannot copy content of this page.