February 11, 2026
WhatsApp Image 2026-02-11 at 8.48.24 AM
ಮಂಗಳೂರು : ಮ್ಯಾಟ್ರಿಮೋನಿ ಮೂಲಕ 9 ಯುವತಿಯರನ್ನು ಮದುವೆಯಾಗಿ ವಂಚಿಸಿದ್ದ ಆರೋಪಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಸುಶಾಂತ್ ಪೂಜಾರಿ, ಮುಲ್ಕಿನಿವಾಸಿ ಭಾಸ್ಕರ್ ಬಂಧಿಸಲಾಗಿದೆ. ವಂಚಕನ ಬಗ್ಗೆ ಮಂಗಳೂರಿನ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮ್ಯಾಟ್ರಿಮೋನಿಯಲ್ಲಿ ವರನನ್ನು ಹುಡುಕುತ್ತಿದ್ದ ಯುವತಿಯರಿಗೆ ವಂಚನೆ ಮಾಡುತ್ತಿದ್ದರು. ಮದುವೆ ಆಗಿ ಅವರಿಂದ ಲಕ್ಷಾಂತರ ಹಣ ಪಡೆದು ಪರಾರಿಯಾಗುತ್ತಿದ್ದರು. ಈವರೆಗೆ 9 ಯುವತಿಯರಿಗೆ ಆರೋಪಿ ಸುಶಾಂತ್ ಪೂಜಾರಿ ವಂಚಿಸಿದ್ದಾನೆ. ಸುಶಾಂತ್ ಕೃತ್ಯಕ್ಕೆ ಮುಲ್ಕಿ ನಿವಾಸಿ ಭಾಸ್ಕರ್ ಸಾಥ್ ನೀಡುತ್ತಿದ್ದ. ನಾನು ಸುಶಾಂತ್ ಮಾವ ಎಂದು ಹೇಳಿ ಯುವತಿಯರಿಗೆ ಭಾಸ್ಕರ್ ನಂಬಿಸುತ್ತಿದ್ದ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.