
ಬಂಟ್ವಾಳ:ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗೋಣಿ ಚೀಲ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಬಂಟ್ವಾಳ ತಾಲೂಕಿನ ಬಡಕಬೈಲ್ ಎಂಬಲ್ಲಿ ನಡೆದಿದೆ.
ಮುಹಮ್ಮದ್ ಯಾನೆ ಮೋನಾಕ ಎಂಬವರ ಗೋಣಿ ಚೀಲ ದಾಸ್ತಾನು ಇರಿಸುವ ಗೋದಾಮು ಸಂಪೂರ್ಣ ಸುಟ್ಟು ಹೋಗಿದ್ದು, ಪಕ್ಕದ ಹಮೀದ್ ಹಾಗೂ ಸರ್ಪುದ್ದೀನ್ ಎಂಬವರ ಮನೆಗೂ ಬೆಂಕಿ ತಗುಲಿದೆ. ಆದರೆ ಬೆಂಕಿ ತಗುಲಿದ ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ.
