March 13, 2026
WhatsApp Image 2025-02-09 at 1.12.45 PM

ಕಾರವಾರ: ಒಂದೂವರೆ ವರ್ಷದ ಹಿಂದೆ ಕಾರವಾರದಲ್ಲಿ ಮೀನುಗಾರರ ಬಲೆಗೆ ಸಿಕ್ಕಿದ್ದ ಬಂಗುಡೆ (ಇಂಡಿಯನ್ ಮಾಕ್ರೆಲ್) ಮೀನು ಅಂತಿತಹದ್ದಲ್ಲ; ದೇಶದಲ್ಲಿಯೇ ಅತಿ ದೊಡ್ಡ ಬಂಗುಡೆ ಮೀನು ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ. ಆ ಮೀನನ್ನು ಕಾರವಾರದಲ್ಲಿ ಸಂರಕ್ಷಿಸಿ ಇಡಲಾಗಿದೆ.

ಬೈತಖೋಲದ ಆನಂದ ಹರಿಕಂತ್ರ ಅವರ ಬಲೆಗೆ ಈ ಬಂಗಡೆ ಸಿಕ್ಕಿತ್ತು. ಇಂಗ್ಲಿಷ್‌ನಲ್ಲಿ `ಇಂಡಿಯನ್ ಮಾಕ್ರೆಲ್’ ಎಂದು ಕರೆಯುವ ಬಂಗುಡೆಯು 48 ಸೆಂ.ಮೀ. ಉದ್ದ, 1.230 ಕೆ.ಜಿ. ತೂಕವಿದೆ. ಇದು ಹೆಣ್ಣು ಬಂಗುಡೆ ಎಂದು ಗುರುತಿಸಲಾಗಿದೆ.

ಮೀನಿನ ಬಗ್ಗೆ ಕಾರವಾರದ ಸಾಗರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಂಶೋಧನೆ ನಡೆಸಿ, ಇದು ಅತಿ ದೊಡ್ಡ ಬಂಗುಡೆ ಎಂದು ಖಚಿತಪಡಿಸಿದ್ದಾರೆ. ಕೇಂದ್ರ ಸರಕಾರದ ಕಡಲ ಮೀನು ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ) ಕೂಡ ಇದನ್ನು ಪ್ರಕಟಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.