March 4, 2026
WhatsApp Image 2025-12-08 at 10.57.47 AM

ಉಡುಪಿ ನಗರದ ಉದ್ಯಾವರದಲ್ಲಿ ಅಸ್ವಸ್ಥ ಗೊಂಡ ರೋಗಿಯೊಬ್ಬರಿಗೆ ರಾತ್ರಿ 7:00ಯಿಂದ 9 ಗಂಟೆ 30 ನಿಮಿಷದವರೆಗೆ ಅಂಬುಲೆನ್ಸ್ ಸಿಗದೆ ರೋಗಿ ಚಿಂತಾ ಜನಕ ಪರಿಸ್ಥಿತಿ ತಲುಪಿದಾಗ ವಿಶು ಶೆಟ್ಟಿ ಅಂಬಲಪಾಡಿ ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇರಿಸಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ .

ರೋಗಿಯ ಸಂಬಂಧಪಟ್ಟವರು108 ಅಂಬುಲೆನ್ಸ್ ಗೆ ಕರೆ ಮಾಡಿದಾಗ ಅಂಬುಲೆನ್ಸ್ ಲಭ್ಯವಿರಲಿಲ್ಲ. ಖಾಸಗಿ ಅಂಬುಲೆನ್ಸ್ ಗಳು ಕೂಡ ಲಭ್ಯವಿರದಿರುವುದರಿಂದ ರೋಗಿಯ ಕಡೆಯವರು ವಿಶು ಶೆಟ್ಟಿ ಅವರು ಸಂಪರ್ಕಿಸಿದ್ದಾರೆ. ವಿಶು ಶೆಟ್ಟಿ ಕೂಡ ಖಾಸಗಿ ಆಂಬುಲೆನ್ಸ್ ಸಂಪರ್ಕಿಸಿ ಸಿಗದೇ ಇರುವುದರಿಂದ ರೋಗಿ ತೀರ ಚಿಂತಾ ಜನಕ ಪರಿಸ್ಥಿತಿ ತಲುಪಿದ್ದರಿಂದ ಬೇರೆ ದಾರಿ ಕಾಣದೆ ತನ್ನ ಗೂಡ್ಸ್ ಟೆಂಪೋ ಗೆ ಮಂಚ ಇರಿಸಿ ಅದರ ಮುಖಾಂತರ ರೋಗಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಬೇಕಾಯಿತು.

ಕಳೆದ ಒಂದು ವರುಷದಿಂದ 108 ಅಂಬುಲೆನ್ಸ್ ಸರಿಯಾಗಿ ಲಭ್ಯ ಇಲ್ಲದಿರುವುದರಿಂದ ನೂರಾರು ರೋಗಿಗಳು ಮೃತಪಟ್ಟಿದ್ದಾರೆ. ಈ ಬಗ್ಗೆ ನಾನು ಕಳೆದ ಒಂದು ವರ್ಷದಿಂದ ಸರಕಾರದ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಲಿಲ್ಲ. ಈ ಘಟನೆಯಲ್ಲಿ ಕೂಡ ಎರಡುವರೆ ಗಂಟೆ ಅಂಬುಲೆನ್ಸ್ ಸಿಗದೇ ರೋಗಿ ಚಿಂತಾ ಜನಕ ಪರಿಸ್ಥಿತಿ ತಲುಪಿದ್ದು ವಿಧಿ ಇಲ್ಲದೆ ಗೂಡ್ಸ್ ಟೆಂಪೋದಲ್ಲಿ ರೋಗಿಯನ್ನು ಕರೆದುಕೊಂಡು ಹೋಗಬೇಕಾಯಿತು ಇನ್ನಾದರೂ ಸರಕಾರ ಜಿಲ್ಲಾಡಳಿತ ಈ ಬಗ್ಗೆ ಕ್ರಮ ತೆಗೆದುಕೊಂಡು ಸಹಕರಿಸಬೇಕು ಸಾರ್ವಜನಿಕರ ಪ್ರಾಣವನ್ನು ನಿರ್ಲಕ್ಷಿಸಬಾರದು ಉಡುಪಿ ಜಿಲ್ಲೆಯಲ್ಲಿ 108 ಆಂಬುಲೆನ್ಸ್ 18 ಇದ್ದರೂ ಸೇವೆಗೆ ಸಿಗುವುದು ಐದರಿಂದ ಆರು ಮಾತ್ರ.

About The Author

Leave a Reply

Your email address will not be published. Required fields are marked *

You cannot copy content of this page.