March 15, 2026
WhatsApp Image 2023-11-08 at 6.16.42 PM

ಪುತ್ತೂರು : ಸೋಮವಾರ ರಾತ್ರಿ ಹತ್ಯೆಯಾದ ಕಲ್ಲೇಗ ಟೈಗರ್ಸ್ ಸ್ಥಾಪಕ ಅಕ್ಷಯ್ ಕಲ್ಲೇಗ ಮನೆಗೆ ಪುತ್ತಿಲ ಪರಿವಾರ ನಾಯಕ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಅಕ್ಷಯ್ ಕಲ್ಲೇಗ ಕುಟಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

ಬಳಿಕ ಮತನಾಡಿದ ಪುತ್ತಿಲ ಘಟನೆ ನಡೆದ ದಿನವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ, ಅಕ್ಷಯ್ ಕಲ್ಲೇಗ ಕೊಲೆ ಆರೋಪಿಗಳಿಗೆ ಕಾನೂನು ಪ್ರಕಾರ ಸೂಕ್ತ ಶಿಕ್ಷೆ ಆಗಬೇಕು.ಪುತ್ತೂರಿನಲ್ಲಿ ಠಾಣೆಯ ಹಿಡಿತದಲ್ಲಿರುವ ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಮಾದ್ಯಮಗಳಿಂದ ತಿಳಿದುಬಂದಿದೆ.

ಇಲಾಖೆ ಆದಷ್ಟು ಶೀಘ್ರ ಪುತ್ತೂರಿನ ಸಿಸಿಟಿವಿಗಳನ್ನು ಸರಿ ಮಾಡಿ ರಾತ್ರಿ ಹೊತ್ತು ಗಸ್ತು ಹೆಚ್ಚಿಸಬೇಕು.ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಯಾರು ಪಾಲ್ಗೊಂಡರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

About The Author

Leave a Reply

Your email address will not be published. Required fields are marked *

You cannot copy content of this page.