March 18, 2026
WhatsApp Image 2025-07-08 at 9.12.31 AM

ಮಂಗಳೂರು; ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ನಿಧನವಾಗಿರುವ ಘಟನೆ ಸುರತ್ಕಲ್ ಕೃಷ್ಣಾಪುರ ಹಿಲ್ ಸೈಡ್ ಬಳಿ ನಡೆದಿದೆ. ಹಿಲ್ ಸೈಡ್ ನಿವಾಸಿ ಅಸ್ಲರ್ ಅಲಿ ಎಂಬವರ ಪುತ್ರ ಅಫ್ತಾಬ್ (18) ಮೃತ ವಿದ್ಯಾರ್ಥಿ.

ಈತ ಸುರತ್ಕಲ್ ಸೆಕ್ರೆಡ್ ಹಾರ್ಟ್ ನಲ್ಲಿ ಇಲೆಕ್ಟಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಕಲಿಯುತ್ತಿದ್ದ ಎನ್ನಲಾಗಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮನೆಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಅಸ್ಲರ್ ಅಲ್ಲಿ ಅವರ ನಾಲ್ಕು ಮಂದಿ ಮಕ್ಕಳ ಪೈಕಿ ಅಫ್ತಾಬ್ ಏಕೈಕ ಗಂಡು ಮಗನಾಗಿದ್ದು, ಇವರ ಮೂವರು ಪುತ್ರಿಯರಿಗೆ ಮದುವೆಯಾಗಿದೆ. ಅವರ ಪತ್ನಿ ಕೊರೋನಾ ಸಂದರ್ಭ ಮೃತಪಟ್ಟಿದ್ದು, ಮನೆಯಲ್ಲಿ ತಂದೆ ಮತ್ತು ಮಗ ಇಬ್ಬರೇ ವಾಸವಾಗಿದ್ದರು.

ಆಟೊ ರಿಕ್ಷಾ ಚಾಲಕರಾಗಿದ್ದ ಅಲಿ ಅವರು ಮಧ್ಯಾಹ್ನದವರೆಗೂ ಮನೆಯಲ್ಲಿ ಮಗನೊಂದಿಗೆ ಇದ್ದರು. 1 ಗಂಟೆಯ ವೇಳೆ ಅವರು ಬಾಡಿಗೆಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

About The Author

Leave a Reply

Your email address will not be published. Required fields are marked *

You cannot copy content of this page.