March 11, 2026
WhatsApp Image 2024-06-08 at 11.59.40 AM

ಕುಂದಾಪುರ: ತನ್ನ ಸಹೋದ್ಯೋಗಿ ವಿವಾಹಿತ ವೈದ್ಯೆಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ, ಕುಂದಾಪುರ ಸರ್ಕಾರೀ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ. ರಾಬರ್ಟ್ ರೆಬೆಲ್ಲೋ ಅವರನ್ನು ಪೊಲೀಸರು ಗುಜರಾತಿನ ಲಾಡ್ಜ್ ಒಂದರಲ್ಲಿ ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಮೊಬೈಲ್ ಇಂಟರ್ನೆಟ್ ನೆಟ್ ವರ್ಕ್ ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಗುಜರಾತಿ ನಿಂದ ಆರೋಪಿಯನ್ನು ಪೊಲೀಸರು ರೈಲಿನಲ್ಲಿ ಕರೆತಂದಿದ್ದು ಶುಕ್ರವಾರ ರಾತ್ರಿ 10:00 ಸುಮಾರಿಗೆ ಕುಂದಾಪುರಕ್ಕೆ ಆಗಮಿಸಿದ್ದಾರೆ ಪ್ರಕರಣದ ಬಗ್ಗೆ ಆರೋಪಿಯ ವಿಚಾರಣೆ ನಡೆಸುತ್ತಿರುವ ಪೊಲೀಸರು ಮುಂದಿನ ಕ್ರಮಕ್ಕೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

About The Author

Leave a Reply

Your email address will not be published. Required fields are marked *

You cannot copy content of this page.