March 23, 2026
WhatsApp Image 2024-05-08 at 5.28.59 PM

ಬೆಳ್ತಂಗಡಿ: ಕೌಟುಂಬಿಕ ಕಲಹದ ಹಿನ್ನಲೆ ವ್ಯಕ್ತಿಯೋರ್ವರಿಗೆ ಸೊಸೆ ಮತ್ತು ಆಕೆಯ ತವರು ಮನೆಯವರು ಅವ್ಯಾಚ್ಯವಾಗಿ ಬೈದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಘಟನೆ ಮೂಡುಕೋಡಿ ಗ್ರಾಮ, ಬೆಳ್ತಂಗಡಿಯಲ್ಲಿ ನಡೆದಿದೆ. ಹಲ್ಲೆ ನಡೆಸಿದ ಆರೋಪಿತೆ ಶ್ರೀಮತಿ ವಸಂತ @ ಮೋಹನಾಕ್ಷಿ ಎಂದು ಎನ್ನಲಾಗಿದೆ. ಮೂಡುಕೋಡಿ ಗ್ರಾಮ, ಬೆಳ್ತಂಗಡಿ ನಿವಾಸಿ, ವೆಂಕಟ್ರಮಣ ಭಟ್‌ (71) ಎಂಬವರ ದೂರಿನಂತೆ, ಅವರ ಸೊಸೆ ವಸಂತ @ ಮೋಹನಾಕ್ಷಿ ಸುಮಾರು ಒಂದು ತಿಂಗಳ ಹಿಂದೆ ತನ್ನ ಗಂಡ ಹಾಗೂ ಮನೆಯವರೊಂದಿಗೆ ಗಲಾಟೆ ನಡೆಸಿ ಸಣ್ಣ ಮಗನನ್ನು ಕರೆದುಕೊಂಡು ಆಕೆಯ ತವರು ಮನೆಗೆ ಹೋಗಿದ್ದರು, ಮಂಗಳವಾರ ಬೆಳಿಗ್ಗೆ, ತನ್ನ ದೊಡ್ಡ ಮಗನನ್ನು ಕರೆದುಕೊಂಡು ಹೋಗಲು, ವೆಂಕಟ್ರಮಣ ಭಟ್‌ ಅವರ ಮನೆಗೆ ಆಕೆಯ ತಾಯಿ ಹಾಗೂ ಸಹೋದರನಾದ ಹೇಮೇಶ ಎಂಬವರ ಜೊತೆ ಬಂದು ಮಾವ ವೆಂಕಟ್ರಮಣ ಭಟ್‌ರವರಿಗೆ ಅವ್ಯಾಚ್ಯವಾಗಿ ಬೈದು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ವೆಂಕಟ್ರಮಣ ಭಟ್‌ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ, ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

About The Author

Leave a Reply

Your email address will not be published. Required fields are marked *

You cannot copy content of this page.