ಮಂಗಳೂರು: ಕೇರಳ ಮೂಲದ ದಂಪತಿಗಳು ಒಂದೇ ಪ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಫಳ್ನೀರಿನ ಲಾಡ್ಜ್ ಒಂದರಲ್ಲಿ ನಡೆದಿದೆ. ಮೃತರನ್ನು ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿಗಳಾದ ರವೀಂದ್ರನ್(56) ಮತ್ತು ಅವರ ಪತ್ನಿ ಸುಧಾ (50) ಎಂದು ಗುರುತಿಸಲಾಗಿದೆ.
ನಗರದ ಫಳ್ನೀರಿನ ಬ್ಲೂ ಸ್ಟಾರ್ ಲಾಡ್ಜ್ ಗೆ ಫೆಬ್ರವರಿ 6 ರಂದು ಆಗಮಿಸಿದ್ದ ದಂಪತಿ ರಾತ್ರಿ ಹೊಟೇಲ್ ಸಿಬ್ಬಂದಿಯಲ್ಲಿ ಊಟ ತರಿಸಿಕೊಂಡಿದ್ದರು, ಆದರೆ ಕಳೆದ ಎರಡು ದಿನಗಳಿಂದ ಬಾಗಿಲು ತೆಗೆಯದ ಕಾರಣ ಬಾಗಿಲು ಒಡೆದು ನೋಡಿದಾಗ ಒಂದೇ ಫ್ಯಾನಿಗೆ ಇಬ್ಬರೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಕೇರಳದ ಕಣ್ಣೂರಿನಲ್ಲಿ ಇವರು ಬಟ್ಟೆ ವ್ಯಾಪಾರಿಯಾಗಿದ್ದರು ಎನ್ನಲಾಗಿದೆ. ಒಂದೇ ಫ್ಯಾನಿಗೆ ಇಬ್ಬರೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಸಾವಿನಲ್ಲೂ ದಂಪತಿ ಒಂದಾಗಿ ಪ್ರಾಣ ಬಿಟ್ಟಂತಾಗಿದೆ. ಯಾಕಾಗಿ ಸಾವಿಗೆ ಶರಣಾಗಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಸ್ಥಳಕ್ಕೆ ಬಂದರು ಪೊಲೀಸರು ಮತ್ತು ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.