ಕಾಪು: ಕಾಪು ಬೀಚ್ ಬಳಿ ಯುವಕನೋರ್ವ ಬೈಕ್, ಮೊಬೈಲ್ ಇಟ್ಟು ನಾಪತ್ತೆಯಾದ ಘಟನೆ ಕಾಪುವಿನಲ್ಲಿ ನಡೆದಿದೆ. ಕಾಪು ಪಡುಗ್ರಾಮ ನಿವಾಸಿ ತುಳಸಿ ಸಾಲ್ಯಾನ್ ಅವರ ಪುತ್ರ ಕರಣ್ ಸಾಲ್ಯಾನ್ (20) ನಾಪತ್ತೆಯಾದ ಯುವಕ. ಈತ ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದು ಶುಕ್ರವಾರ ಬೆಳಿಗ್ಗೆ ಕಾಪು ಬೀಚ್ ಬಳಿ ಬೈಕ್, ಬೆಲೆಬಾಳುವ ಫೋನ್, ನಗದು ಸಹಿತವಾಗಿ ಪರ್ಸ್ ಪತ್ತೆಯಾಗಿದೆ. ಮನೆಯವರು ಮತ್ತು ಸ್ಥಳೀಯರು ಕಾಪು ಬೀಚ್ ಬಳಿ, ಸಮುದ್ರ ತೀರ ಮತ್ತು ಸಮುದ್ರದಲ್ಲಿ ತೀವ್ರ ಹುಡುಕಾಟ ನಡೆಸಿದ್ದು ಶುಕ್ರ ವಾರವೂ ಹುಡುಕಾಟ ಮುಂದುವರಿಸಿದ್ದಾರೆ. ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Check Also
ಜುಲೈ.23ರಂದು 2024-25ನೇ ಸಾಲಿನ ‘ಕೇಂದ್ರ ಬಜೆಟ್’ ಮಂಡನೆ
ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ( Union Budget ) ಜುಲೈ 23 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಸಂಸತ್ತಿನ …