March 20, 2026
WhatsApp Image 2024-01-07 at 9.13.12 AM

ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾ.ಪಂ. ಸಿಬಂದಿ ಚಂದ್ರಹಾಸ (29) ಶನಿವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಲು ಪಂಚಾಯತ್‌ ಕಚೇರಿಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಅವರು ಕಲ್ಲಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯ ಬರ್ಕಬೆಟ್ಟು ನಿವಾಸಿ ದಿ| ದಾದು ಅವರ ಪುತ್ರ.

ಮನೆಯಿಂದ ನೂರು ಮೀಟರ್‌ ದೂರದಲ್ಲಿ ಕುಸಿದು ಬಿದ್ದ ಚಂದ್ರಹಾಸ ಅವರನ್ನು ಮೂಡುಬಿದಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅದಾಗಲೇ ಅವರು ಕೊನೆಯುಸಿರೆಳೆದಿದ್ದರು.

ಉತ್ತಮ ಆಟಗಾರ
ಕಳೆದ 10 ವರ್ಷಗಳಿಂದ ಪಂಚಾ ಯತ್‌ನಲ್ಲಿ ಸಿಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅತ್ಯುತ್ತಮ ಕ್ರಿಕೆಟ್‌ ಆಟಗಾರರಾಗಿದ್ದ ಚಂದ್ರಹಾಸ್‌ ಅವರು ಸ್ಥಳೀಯ ಕೆಎಫ್‌ಸಿ ತಂಡದ ಸದಸ್ಯರಾಗಿದ್ದರು. ಅಲ್ಲದೆ ಉತ್ತಮ ಚಿತ್ರಕಲಾವಿದರೂ ಆಗಿದ್ದರು.

ಜನರ ಜಮಾವಣೆ
ಅವರ ಸಾವಿನ ವಿಷಯ ತಿಳಿದೊಡನೆ ಸಾವಿರಾರು ಮಂದಿ ಪಂಚಾಯತ್‌ ಕಚೇರಿಯಲ್ಲಿ ಜಮಾಯಿಸಿ ಮೃತರ ಅಂತಿಮ ದರ್ಶನ ಪಡೆದರು.

ಪೇಟೆ ಬಂದ್‌ ಮಾಡಿ ಸಂತಾಪ
ಕಲ್ಲಮುಂಡ್ಕೂರು ಪೇಟೆಯನ್ನು ಸುಮಾರು 2 ತಾಸು ಬಂದ್‌ ಮಾಡಿ ಮೃತರಿಗೆ ಗೌರವ ಸಲ್ಲಿಸಲಾಯಿತು. ಪಂಚಾಯತ್‌ ಅಧ್ಯಕ್ಷರು, ಸದಸ್ಯರು, ಸಿಬಂದಿ, ನಾಗರಿಕರ ಸಹಿತ ಕೆಎಫ್‌ಸಿ ತಂಡದವರು ಚಂದ್ರಹಾಸ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.