March 12, 2026
WhatsApp Image 2024-12-06 at 9.00.52 AM

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಘಟನೆ ನಗರದ ಕಡಿಯಾಳಿ ಓಕುಡೆ ಟವರ್ಸ್ ಬಳಿ ಸಂಭವಿಸಿದೆ. ಘಟನೆಯಲ್ಲಿ ಹಲವು ವಾಹನಗಳು ಜಖಂಗೊಂಡಿದ್ದು ಓರ್ವ ವೃದ್ಧನಿಗೆ ಗಂಭೀರ ಗಾಯಗಳಾಗಿವೆ.

ಮಣಿಪಾಲದಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರ್‌ನಲ್ಲಿ ಓರ್ವ ಯುವಕ ಮತ್ತು ಯುವತಿ ಇದ್ದರು ಎನ್ನಲಾಗಿದೆ. ಕಾರ್‌ನಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನೂ ಸ್ಥಳೀಯರು ಹೊರತೆಗೆದು ಬಚಾವ್ ಮಾಡಿದ್ದಾರೆ.

ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಪಲ್ಟಿಯಾದ ಕಾರು ವೇಗವಾಗಿ ಬಂದಿದ್ದರಿಂದ ಪಲ್ಟಿಯಾಗಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳನ್ನು ತಳ್ಳಿಕೊಂಡು ಹೋಗಿದ್ದು ವಾಹನಗಳು ಜಖಂಗೊಂಡಿವೆ.

About The Author

Leave a Reply

Your email address will not be published. Required fields are marked *

You cannot copy content of this page.