
ಮಂಗಳೂರು: ಇನ್ಸಾಗ್ರಾಂ ಖಾತೆಯ ಮೂಲಕ ಸಾರ್ವಜನಿಕರಿಗೆ ‘ವೈಯಕ್ತಿಕ ಸಮಸ್ಯೆಗಳಿಗೆ ಪೂಜೆ ಮಾಡಿ ತತ್ಕ್ಷಣ ಪರಿಹಾರ’ ನೀಡುವುದಾಗಿ ನಂಬಿಸಿ ಒಬ್ಬ ವ್ಯಕ್ತಿಯಿಂದ ರೂ. 24,78,274 ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ. 87/2025, 3. 66(D) IT Act : 318(4) BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ತನಿಖೆಯ ವೇಳೆ ದಿನಾಂಕ: 04-11-2025 ರಂದು ವಾಸುದೇವ ಆರ್ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮೂಲತಃ ಗೋಕುಲ 1st ಹಂತ, ಯಶವಂತಪುರ, ಬೆಂಗಳೂರು ನಿವಾಸಿಯಾಗಿದ್ದು, ಪ್ರಸ್ತುತ ಶ್ರೀನಿವಾಸನಗರ, ಸುಂಕದಕಟ್ಟೆ, ಬೆಂಗಳೂರಲ್ಲಿ ವಾಸಿಸುತ್ತಿದ್ದನು.ಪೊಲೀಸರು ಆರೋಪಿಯಿಂದ ಕೃತ್ಯಕ್ಕೆ ಬಳಸಿದ 4 ಮೊಬೈಲ್ ಫೋನ್ಗಳು, ಹಾಗೂ ರೂ. 20,300 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
