ಹೆಬ್ರಿ : ಕಾರ್ಕಳ ಸಮೀಪದ ಮುದ್ರಾಡಿ ಗ್ರಾಮದ ಬಲ್ಲಾಡಿ ದರ್ಖಾಸು ಜಂಕ್ಷನ್ ಬಳಿ ತಂಡವೊಂದು ಮುದ್ರಾಡಿ ಗ್ರಾಮದ ಸುನಿಲ್ (32) ಎಂಬ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ
ರಾತ್ರಿ 7.15ರ ವೇಳೆ ಸುನಿಲ್ ಸ್ನೇಹಿತರ ಜತೆ ಮಾತನಾಡುತ್ತಿದ್ದಾಗ ಜೀಪು ಮತ್ತು ಬೈಕ್ನಲ್ಲಿ ಬಂದ ಚಂದ್ರ, ದಿವಾಕರ, ಮಂಜುನಾಥ ಮತ್ತು ಪ್ರವೀಣ ಎಂಬವರು ಹಲ್ಲೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಸುನಿಲ್ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.