
ಬೆಳ್ತಂಗಡಿ: ಪತಿಯೇ ಪತ್ನಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಗಾಯಗೊಳಿಸಿದ ಆಘಾತಕಾರಿ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಪ್ಲೊಟ್ಟುನಲ್ಲಿ ನಡೆದಿದೆ.
ಕುಪ್ಲೊಟ್ಟು ನಿವಾಸಿ ಲಿಂಗಪ್ಪ ಪ್ರಕರಣದ ಆರೋಪಿಯಾಗಿದ್ದು, ಆ್ಯಸಿಡ್ ದಾಳಿಗೊಳಗಾದ ಆತನ ಪತ್ನಿ ಸರೋಜ(44) ಎಂಬವರು ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಸರೋಜಾ ಗಂಡ ಊಟ ಕೇಳಿದ ಸಂದರ್ಭದಲ್ಲಿ ಊಟವನ್ನು ನೀಡಿರಲಿಲ್ಲ. ಬಳಿಕ ಪಕ್ಕದ ಸಂಬಂಧಿಕರ ಮನೆಯಲ್ಲಿ ಊಟ ಮಾಡಿ ಬಂದು ಮಲಗಿದ ಸಂದರ್ಭದಲ್ಲಿ ರಬ್ಬರ್ ಶೀಟ್ ತಯಾರಿಸುವ ಆ್ಯಸಿಡ್ ಹಾಕಿ ದಾಳಿ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಫೆ.28 ರಂದು ನಡೆದಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಾ.1ರಂದು ಸರೋಜ ನೀಡಿದ ದೂರಿಮ ಮೇರೆಗೆ ಪತಿ ಲಿಂಗಪ್ಪ ವಿರುದ್ಧ BNS -2023 (u/s-109,124(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
