March 22, 2026
WhatsApp Image 2024-01-06 at 4.46.17 PM

ಸುಳ್ಯದ ಖಾಸಗಿ‌ ಬಸ್‌ ನಿಲ್ದಾಣದ ಸಮೀಪ ಹಾಕಲಾಗಿದ್ದ ಸುಳ್ಯ ಜಾತ್ರೋತ್ಸವ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ವಿಚಾರದ ಬ್ಯಾನರನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ.

ಶ್ರೀರಾಮನ ಫೋಟೊ ಹರಿದಿ ಹಾಕಿದ್ದಾರೆ, ನಾಲ್ಕು ದಿನಗಳ ಹಿಂದೆ ಬ್ಯಾನರ್ ಅಳವಡಿಸಲಾಗಿದ್ದು ಶುಕ್ರವಾರ ರಾತ್ರಿ ಬ್ಯಾನರ್ ನಲ್ಲಿದ್ದ ಅಯೋಧ್ಯೆ ಶ್ರೀರಾಮನ ಭಾವಚಿತ್ರ ಹರಿಯಲಾಗಿದೆ. ಶನಿವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ವಿವರ ಪಡೆದಿದ್ದಾರೆ. ಇನ್ನು ಬ್ಯಾನರ್ ಹರಿದಿರುವ ಕುರಿತು ತನಿಖೆ ನಡೆಸಿ, ನ್ಯಾಯಕೊಡಿಸುವುದಾಗಿ ಎಸ್.ಐ. ಈರಯ್ಯರು ರಿಕ್ಷಾ ಚಾಲಕರಿಗೆ ಭರವಸೆ ನೀಡಿದ್ದಾರೆ. ಹಿಂದೂಗಳ ಭಾವನೆ ಜೊತೆ ಚೆಲ್ಲಾಟವಾಡುವ ರಾಮವಿರೋಧಿಗಳನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು ಇಲ್ಲದಿದ್ದರೆ ಹಿಂದೂ ಸಮಾಜ ಹೋರಾಟಕ್ಕಿಳಿಯಬೇಕಾದಿತು ಹಿಂದೂ ಪರ ಹೋರಾಟಗಾರ ಅರುಣ್ ಕುಮಾರ್ ಪುತ್ತಿಲ ಎಚ್ಚರಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.